ದಕ್ಷಿಣ ಅಮೆರಿಕ -
ಪಶ್ಚಿಮಾರ್ಧ ಗೋಳದ ದಕ್ಷಿಣದ ಖಂಡ. ಪ. ರೇ. 350-800 ಮತ್ತು ಉ. ಅ.  120 ದ. ಅ. 550 ನಡುವೆ ವ್ಯಾಪಿಸಿದೆ. ದಕ್ಷಿಣ ಅಮೆರಿಕ ಪೂರ್ವ ಪಶ್ಚಿಮವಾಗಿ 5150ಕಿ.ಮೀ. ಉತ್ತರ ದಕ್ಷಿಣವಾಗಿ 7645ಕಿ.ಮೀ. ಇದ್ದು 32000ಕಿ.ಮೀ ಸಮುದ್ರ ತೀರವಿದೆ.  ದರ ಒಟ್ಟು ಭೂ ವಿಸ್ತೀರ್ಣ 1,78,68,000. ಚ.ಕೀ.ಮೀ. ಜನಸಂಖ್ಯೆ 34,69,90,000 (2000). ಜನಸಂಖ್ಯೆಯ ದೃಷ್ಟಿಯಿಂದ ಇದು ಖಂಡ.
ರಾಜಕೀಯವಾಗಿ ಈ ಖಂಡವು ಇದರ ನೆರೆಯ ದ್ವೀಪಗಳೂ 12 ಗಣರಾಜ್ಯಗಳು ಮತ್ತು ಎರಡು ಅಧೀನ ರಾಜ್ಯಗಳಾಗಿ ವಿಂಗಡಿವಾಗಿವೆ.  ಅರ್ಜೆಂಟೀನ, ಬೊಲಿವೀಯ, ಬ್ರಜಿûಲ್, ಚಿಲಿ, ಕೊಲಂಬಿಯ, ಎಕ್ವಡಾರ್, ಗೈಯಾನ, ಪರಗ್ವೇ, ಪೆರು, ಉರಗ್ವೇ, ವೆನಿಜಿû್ವೀಲ, ಸುರಿನಾಮ್,-ಇವು ಗಣರಾಜ್ಯಗಳು.  ಫಾಕ್ಲೆಂಡ್ ದ್ವೀಪಗಳು (ಬ್ರಿಟಿಷ್), ಫ್ರೆಂಚ್ ಗೈಯಾನ ಮತ್ತು  - ಇವು ವಸಾಹತುಗಳು.
(ಕೆ.ಆರ್.ಆರ್.)

ಭೂವಿe್ಞÁನ : ದಕ್ಷಿಣ ಅಮೆರಿಕಾ ಬ್ರಜಿûಲ್ ಮತ್ತು ಗಯಾನ ಪ್ರಸ್ಥಭೂಮಿಯಲ್ಲಿ ಅತ್ಯಂತ ಪುರಾತನ ಶಿಲೆಗಳನ್ನು ನೋಡಬಹುದು.  ಉತ್ತರ ಅಮೆರಿಕದ ಲಾರೆನ್ಸಿಯನ್ ಶಾಶ್ವತ ಭೂಭಾಗಕ್ಕೆ (ಶೀಲ್ಡ್ ಏರಿಯಾ) ಇದನ್ನು ಹೋಲಿಸಬಹುದು.  ಅಲ್ಲಿನಂತೆ ಇಲ್ಲಿ ಸಹ ಪೂರ್ವ ಕೇಂಬ್ರಿಯನ್ ಯುಗದ ನೈಸ್ (ಗೀರುಶಿಲೆ) ಮತ್ತು ಷಿಸ್ಟ್ (ಪದರು ಶಿಲೆ) ಶಿಲಾಸಮೂಹ ಉಂಟು.  ಇದನ್ನು ಅಡಿಯ ಶಿಲಾಸಮುದಾಯ ಎಂದೂ ಕರೆಯುತ್ತಾರೆ.  ಈ ಸಮುದಾಯದ ಶಿಲೆಗಳು ಬ್ರಜಿûಲ್ ಮತ್ತು ಗಯಾನ ಪ್ರಾಂತಗಳಲ್ಲಿ ಅನೇಕ ಕಡೆ ಹೊರಚಾಚಿವೆ.  ಕೆಲವು ಭಾಗಗಳಲ್ಲಿ ಇವು ವಯಸ್ಸಿನಲ್ಲಿ ತಮಗಿಂತ ಕಿರಿಯವನೆನಿಸಿದ ಪೆಲಿಯೊeóÉೂೀಯಿಕ್ ಯುಗದ ಪ್ರಸ್ತರ ಶಿಲೆಗಳಿಂದ ಆವೃತವಾಗಿದೆ.  ವಯಸ್ಸು, ಸಂಯೋಜನೆ ಮತ್ತು ಹರವುಗಳಲ್ಲಿ ಇವುಗಳಿಗೆ ಸಾಟಿಯಾದ ಶಿಲೆಗಳನ್ನು ದಕ್ಷಿಣ ಮತ್ತು ಪಶ್ಚಿಮ ಆಫ್ರಿಕದ ಹಲವು ಪ್ರದೇಶಗಳಲ್ಲಿ ಗುರುತಿಸಬಹುದು. ಈ ಆಧಾರದ ಮೇಲೆ ಪ್ರಸಕ್ತ ಪರಸ್ಪರ ಬಹುದೂರ ಚದರಿಹೋಗಿರುವ ಈ ಎರಡೂ ಭೂ ಖಂಡಗಳು ಒಮ್ಮೆ ಅಂದರೆ ಜ್ಯುರಾಸಿಕ್ ಯುಗದ ತನಕ ಒಟ್ಟಿಗೆ ಏಕಖಂಡವಾಗಿದ್ದವೆಂದು ಭಾವಿಸಲಾಗಿದೆ.

ದಕ್ಷಿಣ ಅಮೆರಿಕದ ಇತರ ಭೂಭಾಗಗಳು ತೀರಪ್ರದೇಶ ಸಮುದ್ರ ಭಾಗಗಳಲ್ಲಿ ಸಂಚಿತವಾದ ಜಲಜಶಿಲೆಗಳಿಂದ ಕೂಡಿವೆ. ಖಂಡದ ಪುರಾತನ ಭೂ ಭಾಗಗಳ ಸವೆತದಿಂದ ಹೊರಬಂದ ಶಿಲಾವಶೇಷಗಳ ಶೇಖರದಿಂದಾದ ಶಿಲೆಗಳೇ ಇವು.  ಈ ತೀರಪ್ರದೇಶ ಭೂಭಾಗಳು ಹಲವಾರು ಬಾರಿ ಭೂಮಿಯ ಚಟುವಟಿಕೆಗಳಿಗೆ ಸಂಬಂಧಿಸಿದ ಉತ್ಕರ್ಷ, ಅಪಕರ್ಷಗಳಿಗೆ ಒಳಗಾದವು. ಹೀಗಾಗಿ ಮೇಲಕ್ಕೆ ಎತ್ತಲ್ಪಟ್ಟಾಗ ಸಮುದ್ರ ಹಿಂಜರಿಯುತ್ತಲೂ ಕೆಳಕ್ಕೆ ಒತ್ತಲ್ಟಟ್ಟಾಗ ಪಕ್ಕದಲ್ಲಿದ್ದ ಸಮುದ್ರ ಮುಂಜರಿದು ಕರಾವಳಿ ಪ್ರದೇಶಗಳನ್ನು ನೀರಿನಿಂದ ಆವರಿಸುತ್ತಲೂ ಇತ್ತು.  ಆಗ ಆ ಭಾಗಗಳಲ್ಲಿ ಜಲಜಶಿಲಾ ಪ್ರಸ್ತರಗಳು ನಿಕ್ಷೇಪಗೊಂಡವು.  ಈ ತೆರನಾದ ಹಿಂಜರಿತ-ಮುಂಜರಿತಗಳು (ರಿಗ್ರೆಶನ್ಸ್ - ಟ್ರಾನ್ಸ್‍ಗ್ರೆಶನ್ಸ್) ಹಲವಾರು ಬಾರಿ ಉಂಟಾದವೆನ್ನಲು ಅನೇಕ ಆಧಾರಗಳು ದೊರೆತಿವೆ. ಸಮುದ್ರದ ಮುಂಜರಿತಗಳ ದೆಸೆಯಿಂದ ದಕ್ಷಿಣ ಅಮೆರಿಕ ಖಂಡ ತನ್ನ ವಿಸ್ತೀರ್ಣದಲ್ಲಿ ಸಹ ಸಾಕಷ್ಟು ಪ್ರಮಾಣದಲ್ಲಿ ಹಿಗ್ಗುತ್ತ ಹೋಯಿತೆಂದು ಭಾವಿಸಲಾಗಿದೆ.

ಮೀಸೊeóÉೂೀಯಿಕ್ ಯುಗದಲ್ಲಿ ಖಂಡದ ಪಶ್ವಿಮ ಮತ್ತು ಉತ್ತರ ತೀರದಲ್ಲಿ ಬಹು ಆಗಾಧ ಪ್ರಮಾಣದ ಒಂದು ಅಭಿನತಿ (ಜಿಯೊಸಿಂಕ್ಸೈನ್) ಇತ್ತು.  ಅದರಲ್ಲಿ ಸಹಸ್ರಾರು ಅಡಿಗಳಷ್ಟು ಮಂದವಾದ ಜಲಜಶಿಲಾ ನಿಕ್ಷೇಪಗಳು ಉಂಟಾದವು.  ಭೂ ಹೊರ ಚಿಪ್ಪಿನಲ್ಲಿ ಏರುಪೇರುಗಳ ತಲೆದೋರಿ ಮಟ್ಟಸವಾಗಿದ್ದ ಪ್ರಸ್ತರಗಳು ತೀವ್ರವಾಗಿ ಮಡಿಕೆ ಬಿದ್ದು ಇಡೀ ಭೂಭಾಗವೇ ಮೇಲಕ್ಕೆ ಎತ್ತಲ್ಪಟ್ಟಿತ್ತು.  ಈ ಬಗೆಯ ಭೂ ಚಟುವಟಿಕೆಗಳು ಟರ್ಷಿಯರಿ ಯುಗದ ಉದ್ದಕ್ಕೂ ನಡೆಯುತ್ತಿದ್ದು ಕಟ್ಟಕಡೆಗೆ ಪ್ರಖ್ಯಾತವಾದ ಅಂಡೀಸ್ ಪರ್ವತಶ್ರೇಣಿ ಮೈವೆತ್ತಿತ್ತು. ಇದರ ಜನನಕ್ಕೆ ಹಾಸುಹೊಕ್ಕಾಗಿ ಮಾತೃಶಿಲಾದ್ರವದ ಚಟುವಟಿಕೆಯೂ ತಲೆದೋರಿ ಶಿಲಾದ್ರವ ಹೊರಚಿಪ್ಪಿನ ಅನೇಕ ಕಡೆ ಒಳನುಗ್ಗಿತು.  ಹಲವು ಪ್ರದೇಶಗಳಲ್ಲಿ ಅಗ್ನಿ ಪರ್ವತಗಳೂ ಕಾಣಿಸಿಕೊಂಡವು.  ಇವುಗಳಲ್ಲಿ ಹಲವು ಇಂದಿಗೂ ಜಾಗೃತಾವಸ್ಥೆಯಲ್ಲೇ ಇವೆ.  ಅನೇಕ ಜ್ವಾಲಾಮುಖಿಗಳು ಕಾದ ಶಿಲಾರಸವನ್ನು ಅಸಂಖ್ಯಾತ ಪ್ರಮಾಣದಲ್ಲಿ ಹೊರಚೆಲ್ಲಿದ್ದವು.  ಜ್ಯುರಾಸಿಕ್ ಯುಗದಲ್ಲಿ ಈ ಬಗೆಯ ಭೂ ಕಾರ್ಯಾಚರಣೆ ದಕ್ಷಿಣ ಮತ್ತು ಪರಗ್ವೇ ಪ್ರದೇಶಗಳಲ್ಲಿ ತೀವ್ರಗತಿಯಲ್ಲಿ ತಲೆದೋರಿ ಬಹು ವಿಸ್ತಾರವಾದ ಪ್ರದೇಶಗಳಲ್ಲಿ ಬಸಾಲ್ಟ್ ಮತ್ತಿತರ ಅಗ್ನಿಶಿಲೆಗಳು ಶೇಖರವಾದುವು.  ಇದಕ್ಕೆ ಅತ್ಯಂತ ಉತ್ತಮ ಉದಾಹರಣೆ : ಪರಾನಾ ಪ್ರದೇಶದ ವಿಸ್ತಾರವಾದ ಬಸಾಲ್ಟಿಕ್ ಶಿಲಾಸಮುದಾಯ.

ಭೂ ಯುಗದ ಕಾರ್ಬಾನಿಫೆರಸ್ ಮತ್ತು ಪ್ಲೀಸ್ಟೊಸೀನ್ ಕಾಲಗಳಲ್ಲಿ ದಕ್ಷಿಣ ಅಮೆರಿಕದ ಬಹುಭಾಗ ಹಿಮನದಿಗಳಿಂದ ಮುಚ್ಚಿಹೋಗಿತ್ತು.  ಕಾರ್ಬಾನಿಫೆರಸ್ ಹಿಮಯುಗದ ಕೇಂದ್ರ ದಕ್ಷಿಣ ಬ್ರಜಿûಲ್ ಮತ್ತು ಪ್ಲೀಸ್ಟೊಸೀನ್ ಹಿಮಯುಗದ ಕೇಂದ್ರ ದಕ್ಷಿಣ ಅಂಡಿಸ್. ಇಂದಿಗೂ ದಕ್ಷಿಣ ಪಟಗೋನಿಯ ಪ್ರಸ್ಥಭೂಮಿಯಲ್ಲಿ ಆ ಯುಗದ ಹಿಮದ ಹಾಳೆಗಳ ಚೂರುಪಾರುಗಳನ್ನು ಗುರುತಿಸಬಹುದು.  
(ಬಿ.ವಿ.ಜೆ.)

ಖನಿಜಗಳು :  ದಕ್ಷಿಣ ಅಮೆರಿಕದಲ್ಲಿ ಅಪರಿಮಿತ ನೈಸರ್ಗಿಕ ಅನಿಲ ಮತ್ತು ತೈಲಸಂಪತ್ತು ಉಂಟು. ತೈಲದ ನಿಕ್ಷೇಪಗಳೇಲ್ಲವೂ ಆಂಡೀಸ್ ಪರ್ವತದ ಸುತ್ತ ಮುತ್ತಲಿರುವ ರಚನಾತ್ಮಕ ತಗ್ಗುಗಳಲ್ಲಿವೆ.  ಮುಖ್ಯವಾಗಿ ವೆನಿಜೂಲದಲ್ಲಿರುವ ತೈಲದ ಸಂಪತ್ತು 17 ಸಾವಿರ ಮಿಲಿಯನ್ ಬ್ಯಾರೆಲುಗಳೆಂದು ನಿರ್ಧರಿಸಲಾಗಿದೆ.  ಇದಲ್ಲದೇ ಅರ್ಜಂಟೀನ್, ಕೊಲಂಬಿಯಾ, ಪೆರು ಮತ್ತು ಬೊಲೀವಿಯಾಗಳಲ್ಲಿ ಸಹ ಸಮೃದ್ಧಿಯಾದ ತೈಲ ಸಂಪತ್ತು ಉಂಟು.  ನೈಸರ್ಗಿಕ ಅನಿಲ ಸಾಮಾನ್ಯವಾಗಿ ತೈಲದ ನಿಕ್ಷೇಪಗಳೊಡನೆ ಇರುವುದು.  ಕಲ್ಲಿದ್ದಲಿನ ನಿಕ್ಷೇಪಗಳು ಚದರಿದಂತೆ ದಕ್ಷಿಣ ಅಮೆರಿಕದಲ್ಲಿ ಮುಖ್ಯವಾಗಿ ಕೊಲಂಬಿಯಾ, ಚಿಲಿ, ಮತ್ತು ಬ್ರಜಿûಲಿನಲ್ಲಿವೆ.  ಕಬ್ಬಿಣದ ನಿಕ್ಷೇಪಗಳು ಹೇರಳವಾಗಿ ಇವೆ.  ಇವು ಉತ್ತಮ ದರ್ಜೆಯವು. ಪ್ರಾಚೀನ ಪ್ರದೇಶಗಳಾದ ಗಯಾನ ಮತ್ತು ಬ್ರಜಿûಲುಗಳಲ್ಲಿ ಇವನ್ನು ಕಾಣಬಹುದು.  ತಾಮ್ರದ ನಿಕ್ಷೇಪಗಳು ಮಧ್ಯ ಆಂಡೀಸ್ ಪರ್ವತ, ಚಿಲಿ ಮತ್ತು ಪೆರು ದೇಶಗಳಲ್ಲಿವೆ. ಭಾರತ ಮತ್ತು ರಷ್ಯಗಳ ಹಾಗೆ ಬ್ರಜಿûಲಿನಲ್ಲಿ ಕೂಡ ದೊಡ್ಡ ಪ್ರಮಾಣದ ಮ್ಯಾಂಗನೀಸ್ ನಿಕ್ಷೇಪಗಳಿವೆ.  ಇವಲ್ಲದೇ ಅಪರಿಮಿತ ಬಾಕ್ಸೈಟ್ ಗಯಾನ ಮತ್ತು ಬ್ರಜಿûಲಿನಲ್ಲಿಯೂ ಪ್ಲಾಟಿನಮ್ ಕೊಲಂಬಿಯಾದಲ್ಲೂ ಬೆಳ್ಳಿ ಪೆರು ಮತ್ತು ಬೊಲಿವಿಯಾದಲ್ಲೂ ತವರ ಬೊಲಿವಿಯಾದಲ್ಲೂ ನೈಟ್ರೇಟ್ ಚಿಲಿಯಲ್ಲಿಯೂ ನಿಕ್ಷೇಪಗಳಾಗಿ ಸಿಗುತ್ತವೆ.
(ಎಂ.ಎಸ್.ಎಸ್.)

ಮೇಲ್ಮೈ ಲಕ್ಷಣ :  ದಕ್ಷಿಣ ಅಮೆರಿಕವನ್ನು ಪಶ್ಚಿಮದ ಪರ್ವತಶ್ರೇಣಿ, ಪೂರ್ವದ ಪ್ರಸ್ಥಭೂಮಿ, ಮಧ್ಯೆ ಇರುವ ಮೈದಾನಗಳು ಎಂಬುದಾಗಿ ಮೂರು ವಿಭಾಗ ಮಾಡಬಹುದು.  ಇವುಗಳಲ್ಲಿ ಒಂದೊಂದರಲ್ಲೂ ವೈವಿಧ್ಯ ಇದೆ.  
ಪರ್ವತಗಳು : ಆಂಡೀಸ್ ಪರ್ವತಶ್ರೇಣಿಗಳು ಕೊಲಂಬಿಯದ ಎಲ್ಲೆಯಿಂದ ದಕ್ಷಿಣದ ತುದಿಯ ವರೆಗೂ ಖಂಡದ ಪಶ್ಚಿಮದಲ್ಲಿ ಹಬ್ಬಿವೆ.  ಆಂಡೀಸ್ ಪರ್ವತಸ್ತೋಮ ಈ ಖಂಡದ ಬೆನ್ನೆಲುವು; 8,800 ಕಿಮೀ. ಉದ್ದವಾಗಿರುವ ಇದು ಸರಾಸರಿ ಎತ್ತರದಲ್ಲಿ ಹಿಮಾಲಯ ಪರ್ವತಸ್ತೋಮಕ್ಕೆ ಎರಡನೆಯದೆನಿಸಿದೆ.  6,735 ಮೀ. ಗಳಿಗಿಂತ ಎತ್ತವಾಗಿರುವ ಅನೇಕ ಶಿಖರಗಳಿವೆ. 
(ಕೆ.ಆರ್.ಆರ್.)

	ಖಂಡದ ವಾಯುವ್ಯದಲ್ಲಿ ಇದರ ಶ್ರೇಣಿಗಳೆಲ್ಲ ಒಂದೇ ರಾಶಿಯಾಗಿ, ಬೃಹದಾಕಾರದ ಬಗೆಯುವ ಕಲ್ಲಿನಂತಿದೆ.  ಕ್ಯಾರಿಬೀಯನ್ ಸಮುದ್ರದ ಕಡೆಯಿಂದ ಸಮಾನಾಂತರವಾಗಿ ,ಉತ್ತರ-ದಕ್ಷಿಣ ಮತ್ತು ಈಶಾನ್ಯ-ನೈಋತ್ಯವಾಗಿ ಬರುವ ಕಾರ್ಡಿಲೇರ ಓರಿಯೆಂಟಾಲ್, ಕಾರ್ಡಿಲೇರ ಸೆಂಟ್ರಾಲ್ ಮತ್ತು ಕಾರ್ಡಿಲೇರ ಆಕ್ಸಿಡೆಂಟಾಲ್ ಎಂಬ ಕವಲುಗಳು ಕೊಲಂಬಿಯದ ನೈಋತ್ಯ ಗಡಿಯ ಬಳಿ ಒಂದಾಗಿ ಎಕ್ವಡಾರ್‍ನಲ್ಲಿ ಮುಂದುವರಿಯುತ್ತವೆ. ಈ ಕವಲುಗಳ ನಡುವೆ ಕಣಿವೆಗಳಿವೆ. ಎಕ್ವಡಾರ್‍ನಿಂದ ಮುಂದಕ್ಕೆ, ಪೆರುವಿನಲ್ಲಿ ಇವು ಎರಡು ಶ್ರೇಣಿಗಳಾಗಿ, ಖಂಡದ ತೀರದಲ್ಲಿ ಮುಂದುವರಿಯುತ್ತವೆ. ಪಶ್ಚಿಮದ ಶ್ರೇಣಿ ಹೆಚ್ಚು ಎತ್ತರವಾದ್ದು. ಇದರ ಹಿಮಾಚ್ಛಾದಿತ ಉನ್ನತ ಶಿಖರಗಳಲ್ಲಿ ಮುಖ್ಯವಾದವು ವಾಸ್ಕರಾನ್ (6,768 ಮೀ.). ಇವೆರಡು ಶ್ರೇಣಿಗಳ ನಡುವೆ 3,600-4,500 ಮೀ. ಎತ್ತರದ ವಿಸ್ತಾರವಾದ ಆಲ್ಟಿಪ್ಲೇನೋ ಪ್ರಸ್ಥಭೂಮಿ ಸಂಕೀರ್ಣವಿದೆ. ಇದು ಹಲವಾರು ಕಣಿವೆಗಳ ಬಲೆಗಳು, ಗಿರಿಗಳು ಮತ್ತು ಮೈದಾನಗಳಿಂದ ಕೂಡಿ ಟಿಬೆಟ್ ಪ್ರಸ್ಥಭೂಮಿಗೆ ಎರಡನೆಯದಾಗಿವೆ. ಇಲ್ಲಿರುವ ಸರೋವರಗಳಲ್ಲಿ ಮುಖ್ಯವಾದ್ದು ಟಿಟಿಕಾಕ. ಈ ಪ್ರಸ್ಥಭೂಮಿಯನ್ನು ಕತ್ತರಿಸಿಕೊಂಡು ಹಲವು ನದಿಗಳು ಹರಿಯುತ್ತವೆ. ದಕ್ಷಿಣದಲ್ಲಿ ಆಂಡೀಸ್ ವ್ಯವಸ್ಥೆಯ ಹಲವು ಶ್ರೇಣಿಗಳು ಒಂದಾಗಿ ಏಕೈಕ ಸಂಕೀರ್ಣ ಶ್ರೇಣಿಯಾಗಿ ಪರಿಣಮಿಸುತ್ತವೆ. ಇಲ್ಲಿರುವ ಹಲವು ಉನ್ನತ ಶಿಖರಗಳ ಪೈಕಿ ಅತ್ಯುನ್ನತವಾದ್ದು ಆಕನ್‍ಕಾಗ್ವ. 6,960ಮೀ. ಇರುವ ಈ ಶಿಖರ ಪಶ್ಚಿಮಾರ್ಧಗೋಳದಲ್ಲೇ ಅತ್ಯಂತ ಎತ್ತರವಾದ್ದು. ಪ್ಯಾಟಗೋನಿಯದಲ್ಲಿ ಆಂಡೀಸ್ ಶ್ರೇಣಿಯ ಒಂದು ಕವಲು ಸಮುದ್ರದ ಅಡಿಗೆ ಚಾಚಿ, ಕಡಿದಾದ ದಡಗಳಿಂದ ಕೂಡಿದ ಅನೇಕ ಸಣ್ಣ ದ್ವೀಪಗಳಿಗೆ ಕಾರಣವಾಗುತ್ತದೆ. ಆಂಡೀಸ್ ಪರ್ವತಸ್ತೋಮದಲ್ಲಿ ಸುಮಾರು 4,864 ಚ.ಕಿಮೀ. ಪ್ರದೇಶವನ್ನಾಕ್ರಮಿಸಿಕೊಂಡಿರುವ ಹಿಮನದಿಗಳಿವೆ. ಪರ್ವತಸ್ತೋಮವನ್ನು ಅಲ್ಲಲ್ಲಿ ಕೊರೆದಿರುವ ಈ ಹಿಮನದಿಗಳ ತುದಿಯಲ್ಲಿ ಸರೋವರಗಳಿವೆ; ಇಲ್ಲವೇ ಈ ನದಿಗಳು ಹರಿದು ಸಮುದ್ರ ಸೇರುತ್ತವೆ.

	ಆಂಡೀಸಿನಲ್ಲಿ ಅನೇಕ ಅಗ್ನಿಪರ್ವತಗಳುಂಟು. ಪೆಸಿಫಿಕ್ ಸಾಗರದ ಅಂಚಿನ ಮಹಾ ಅಗ್ನಿಯುಂಗುರದ ಭಾಗ ಈ ಪರ್ವತ ವ್ಯವಸ್ಥೆ. ಇಲ್ಲಿ ಭೂಕಂಪಗಳು ಸಾಮಾನ್ಯ.	

	ಪೂರ್ವಕ್ಕೆ ಇರುವ ಗಿಯಾನ ಮತ್ತು ಬ್ರಜಿಲ್ ಪ್ರಸ್ಥಭೂಮಿಗಳಲ್ಲಿ ಅತ್ಯಂತ ಪುರಾತನವಾದ ಸ್ಫಟಿಕ ಶಿಲೆಗಳಿವೆ. ಬಹುತೇಕ ಶಿಲೆಗಳು ಸವೆದಿವೆ. ಗಿಯಾನ ಪ್ರಸ್ಥಭೂಮಿ 250 ಮೀ. ಎತ್ತರಕ್ಕೆ ಹಬ್ಬಿದೆ. ಅಲ್ಲಲ್ಲಿ ಸಣ್ಣ ಬೆಟ್ಟಗಳ ನಡುವೆ ಜವುಗು ತುಂಬಿದ ತಗ್ಗು ನೆಲಗಳಿವೆ. ಇವುಗಳ ಸುತ್ತ ಗೋಪುರಾಕಾರದ ಗ್ರಾನೈಟ್ ಬೆಟ್ಟಗಳಿವೆ. ಇವುಗಳಲ್ಲಿ ಕೆಲವು 610 ಮೀ.ಗಳಿಗಿಂತಲೂ ಹೆಚ್ಚು ಎತ್ತರವಾಗಿವೆ. ದಕ್ಷಿಣದ ಅಂಚಿನಲ್ಲಿ ಕಡಿದಾದ ಟಿಮೂಕಮಾಕ ಪರ್ವತ ಶ್ರೇಣಿಯೂ ಕೆಲವು ಎತ್ತರದ ಶಿಖರಗಳೂ ಇವೆ. ಬ್ರಜಿಲ್ ಪ್ರಸ್ಥಭೂಮಿಯ ವಿಸ್ತೀರ್ಣ ಸುಮಾರು 5,80,000 ಚ.ಮೈ. ಎತ್ತರ ಸು. 3,000 ಅಡಿ. ಇದರ ಮೇಲೆ ಸಣ್ಣ ಗಿರಿಶ್ರೇಣಿಗಳಿವೆ. ಸಾನ್ ಫ್ರನ್ಸಿಸ್ಕೋ ನದಿ ಇದನ್ನು ಆಳವಾಗಿ ಕೊರೆದಿದೆ. ಉತ್ತರದಲ್ಲಿ ಪ್ರಸ್ಥಭೂಮಿ ಕ್ರಮೇಣ ತಗ್ಗುತ್ತ ಸಾಗುತ್ತದೆ. ಆದರೆ ಪೂರ್ವದಲ್ಲಿ ಇದು ಥಟ್ಟನೆ ಇಳಿಯುತ್ತದೆ. ಇದರ ದಕ್ಷಿಣದ ಅಂಚಿನಲ್ಲಿ ಸರದ ಮಾರ್ ಪರ್ವತವಿದೆ. ಅದರಲ್ಲಿ 2,800 ಮೀ.ಗಿಂತ ಎತ್ತರವಾದ ಅನೇಕ ಶಿಖರಗಳುಂಟು. ಅವುಗಳ ಪೈಕಿ ಪೀಕೂ ದಾ ಬ್ಯಾಂಡೆರ ಶಿಖರದ ಎತ್ತರ 2,890 ಮೀ. (9,482 ಅಡಿ). ಇದು ಬ್ರಜಿóಲಿನಲ್ಲಿ ಅತ್ಯುನ್ನತ ಶಿಖರ. ಪೂರ್ವಪ್ಯಾಟಗೋನಿಯದಲ್ಲಿ ಅನೇಕ ಪ್ರಸ್ಥಭೂಮಿಗಳಿವೆ.

	ಮೈದಾನಗಳು : ವೆನಿಜ್ವೀಲದಲ್ಲಿರುವ ಆಂಡೀಸ್ ಭಾಗಕ್ಕೂ ಗಿಯಾನ ಉನ್ನತ ಭೂಮಿಗೂ ನಡುವೆ ಓರಿನೋಕೋ ಕಣಿವೆ ಇದೆ. ಇನ್ನೊಂದು ನದೀ ಕಣಿವೆ ಆಮೆಜಾóನ್. ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ನದೀ ಬಯಲು. ಇದರ ಜಲೋತ್ಸಾರಣ ಪ್ರದೇಶದ ವಿಸ್ತೀರ್ಣ 27,22,000 ಚ.ಮೈ. ಇದರ ಪಶ್ಚಿಮದಲ್ಲಿ ಆಂಡೀಸ್, ಉತ್ತರದಲ್ಲಿ ಗಿಯಾನ ಉನ್ನತ ಪ್ರದೇಶ, ದಕ್ಷಿಣದಲ್ಲಿ ಬ್ರಜಿóಲ್ ಪ್ರಸ್ಥಭೂಮಿಗಳು ಇವೆ. ಪರಗ್ವೇ ನದೀ ಬಯಲು ಬೊಲಿವೀಯ ಪ್ರಸ್ಥಭೂಮಿಗೂ ಬ್ರಜಿóಲ್ ಪ್ರಸ್ಥಭೂಮಿಗೂ ನಡುವೆ ಇದೆ. 

	ನದಿಗಳು : ದಕ್ಷಿಣ ಅಮೆರಿಕದ ಮೂರು ತಗ್ಗು ಬಯಲುಗಳಲ್ಲಿ ಮೂರು ಮುಖ್ಯ ನದೀ ಸಮುದಾಯಗಳಿವೆ. ಖಂಡದ ಎಲ್ಲ ದೊಡ್ಡ ನದಿಗಳೂ ಆಂಡೀಸ್ ಪರ್ವತ ಪ್ರದೇಶದಿಂದ ಅಟ್ಲಾಂಟಿಕ್ ಕಡೆಗೆ ಹರಿಯುತ್ತವೆ. ಇವುಗಳಲ್ಲಿ ಅತ್ಯಂತ ದೊಡ್ಡದು ಆಮೆಜಾನ್, ಸುಮಾರು 4,000 ಮೈಲಿ ಉದ್ದದ ಈ ನದಿ ಮಧ್ಯ ಪೆರುವಿನ ಆಂಡೀಸ್‍ನಲ್ಲಿ ಪೆಸಿಫಿಕ್ ಸಾಗರದಿಂದ 100 ಮೈ. ದೂರದಲ್ಲಿ ಉಗಮಿಸುತ್ತದೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಜಲಾನಯನ ಭೂಮಿ ಇದರದು. ಇದಕ್ಕೆ 1,000ಕ್ಕಿಂತ ಹೆಚ್ಚು ಉಪನದಿಗಳಿವೆ. ಇವುಗಳಲ್ಲಿ ಏಳು ಉಪನದಿಗಳು ತಲಾ 1,000 ಮೈ. ಗಳಿಗಿಂತ ಉದ್ದವಾಗಿವೆ.

	ಪರಗ್ವೇ, ಪ್ಯಾರನಾ ಮತು ಉರಗ್ವೇಗಳದು ಎರಡನೆಯ ಮುಖ್ಯ ನದೀ ವ್ಯವಸ್ಥೆ. ಇವು ರೀಯೋಡಲ ಪ್ಲಾಟ ಆಳಿವೆಯ ಮೂಲಕ ಸಮುದ್ರ ಸೇರುತ್ತವೆ. ಇವುಗಳ ಜಲೋತ್ಸಾರಣ ಪ್ರದೇಶದ ವಿಸ್ತೀರ್ಣ ಸು. 17,00,000 ಚ.ಮೈ. ಪರಗ್ವೇ ನದಿಯ ಉದ್ದ 1,584 ಮೈ. ಪ್ಯಾರನಾ 2.485 ಮೈ, ಉದ್ದವಾಗಿದೆ. ಮೂರನೆಯ ದೊಡ್ಡ ನದೀ ವ್ಯವಸ್ಥೆ ಓರಿನೋಕೋ. ಇದು 3,65,000 ಚ. ಮೈ. ನೆಲದ ನೀರು ಬಸಿಯುತ್ತದೆ. ಇದರ ಉದ್ದ 1,337 ಮೈಲಿ.

	ಸಾವ್ ಫ್ರನ್ಸಿಸ್ಕೋ ನದಿ 1,800 ಮೈ. ಉದ್ದವಾಗಿದೆ. ಇದು ಬ್ರಜಿಲ್‍ನಲ್ಲಿ ಮೀನಸ್ ಷರೈಸ್‍ನಲ್ಲಿ ಹುಟ್ಟಿ ಉತ್ತರಾಭಿಮುಖವಾಗಿ 1,000 ಮೈ. ಹರಿದು ಪೂರ್ವಕ್ಕೆ ತಿರುಗಿ ಅಟ್ಲಾಂಟಿಕ್ ಸೇರುತ್ತದೆ. ಫೆಸಿಫಿಕ್ ಸಾಗರವನ್ನು ಸೇರುವ ನದಿಗಳು ಚಿಕ್ಕವು.                                   
(ಕೆ.ಆರ್.ಆರ್) 

	ಸರೋವರಗಳು : ದಕ್ಷಿಣ ಅಮೆರಿಕದ ಅನೇಕ ಸರೋವರಗಳು ಪರ್ವತ ಸರೋವರಗಳು. ಇವುಗಳಲ್ಲಿ ಅತ್ಯಂತ ದೊಡ್ಡದು ಟಿಟಿಕಾಕ. 12,500 ಅಡಿ (3,810 ಮೀ.) ಎತ್ತರದಲ್ಲಿ ಪೆರು ಮತ್ತು ಬೊಲಿವೀಯಗಳ ನಡುವೆ ಇರುವ ಇದರ ಉದ್ದ 110 ಮೈ. ಅಗಲ 35 ಮೈ. ಪೆರುವಿನಲ್ಲಿ ಹೂನಿನ್ ಮತ್ತು ಸರೋಕೋಚ, ಬೊಲಿವೀಯದಲ್ಲಿರುವ ಪೋಯಪೋ-ಇವು ಇತರ ಪರ್ವತ ಸರೋವರಗಳು.

	ಪ್ಯಾಟಗೋನಿಯದಲ್ಲಿ ಇನ್ನೊಂದು ಬಗೆಯ ಸರೋವರಗಳಿವೆ. ಹಿಮ ಪ್ರವಾಹಗಳು ಕರಗಿ ಆದಂಥವು ಇವು. ಬ್ವೇನಸ್ ಏರೀಸ್, ಅರ್ಜೆಂಟೀನೊ, ನಾವೆಲ್‍ವಾಪೀ-ಇವು ಉದಾಹರಣೆಗಳು.

	ವಾಯುಗುಣ : ಖಂಡದ ಹೆಚ್ಚು ಭಾಗ ಉಷ್ಣ ವಲಯದಲ್ಲಿರುವುದರಿಂದ ಆ ಪ್ರದೇಶದಲ್ಲಿ ಉಷ್ಣತೆ ಹೆಚ್ಚು; ಮತ್ತು ಸಾಮಾನ್ಯವಾಗಿ ಹೆಚ್ಚು ಮಳೆ. ದಕ್ಷಿಣಕ್ಕೆ ಹೋದಂತೆಲ್ಲ ಖಂಡದ ಅಗಲ ಕಡಿಮೆ ಆಗುವುದರಿಂದ ಸಮಶೀತೋಷ್ಣವಲಯ ಪ್ರದೇಶ ವಿಶಾಲ ಸಾಗರಗಳ ಪ್ರಭಾವಕ್ಕೆ ಒಳಗಾಗುತ್ತದೆ. ಆಂಡೀಸ್ ಪರ್ವತದ ಎತ್ತರವಾದ ಭಾಗಗಳಲ್ಲಿ-ಸಮಭಾಜಕ ವೃತ್ತ ಪ್ರದೇಶದಲ್ಲಿ ಕೂಡ-ಕಡಿಮೆ ಉಷ್ಣತೆ ಇರುತ್ತದೆ. ಒಟ್ಟಿನಲ್ಲಿ ಖಂಡದಲ್ಲಿ ನಾಲ್ಕು ಬಗೆಯ ವಾಯುಗುಣಗಳಿವೆ: ಉಷ್ಣ, ಸಮಶೀತೋಷ್ಣ, ಶುಷ್ಕ ಮತ್ತು ಶೀತ.

	ಆಮೆಜಾóನ್ ನದೀಬಯಲು, ಕೊಲಂಬಿಯದ ಪೆಸಿಫಿಕ್ ಕರಾವಳಿ, ಬ್ರಜಿûಲಿನ ತೀರಪ್ರದೇಶದ ಒಂದು ಭಾಗ-ಈ ಪ್ರದೇಶಗಳದು ಸಮಭಾಜಕ ವೃತ್ತದ ವಾಯುಗುಣ; ಇದು ಉಷ್ಣವಲಯದ ಮಳೆಗಾಡು ಪ್ರರೂಪ. 800 ಈ ಗಿಂತ ಹೆಚ್ಚು ಉಷ್ಣತೆ ಇರುತ್ತದೆ. ಬೇಸಗೆ ಮತ್ತು ಚಳಿಗಾಲದ ಉಷ್ಣತೆಯ ಅಂತರ ತುಂಬ ಕಡಿಮೆ. ಸಾಮಾನ್ಯವಾಗಿ ಸಮಭಾಜಕ ವೃತ್ತದ ಉತ್ತರದಲ್ಲಿ ಮೇ-ಸೆಪ್ಟೆಂಬರ್‍ನಲ್ಲಿ ಮಳೆ. ಅಲ್ಲಿ ಆಗ ಬೇಸಗೆ. ದಕ್ಷಿಣದಲ್ಲಿ ಅಕ್ಟೋಬರ್-ಏಪ್ರಿಲ್‍ನಲ್ಲಿ ಮಳೆ. ಶುಷ್ಕ ಋತು ಅಷ್ಟೇನೂ ಗಮನಾರ್ಹವಲ್ಲ, ದೀರ್ಘವೂ ಅಲ್ಲ. ಪಶ್ಚಿಮದ ಕಡೆ ಆಂಡೀಸ್ ಪರ್ವತ ಪ್ರದೇಶಗಳ ಕಡೆ ಮಳೆ ತುಂಬ ಹೆಚ್ಚು. ಅಲ್ಲಿ ವರ್ಷವೆಲ್ಲ ಮಳೆ ಹಂಚಿಕೆಯಾಗಿದೆ. ವಾರ್ಷಿಕ ಮಳೆಗಳು ಈ ರೀತಿ ಇವೆ: ಪರಾದಲ್ಲಿ 98, ಇಕೇಟೋಸ್‍ನಲ್ಲಿ 108, ಕೊಲಂಬಿಯದ ಚೊಕೋ ಪ್ರದೇಶದಲ್ಲಿ 354.  

	ಉಷ್ಣವಲಯ ವಾಯುಗುಣದ ಎರಡನೆಯ ಪ್ರರೂಪ ಸವಾನ ಅಥವಾ ಹುಲ್ಲುಗಾಡು. ಹೆಚ್ಚು ಉಷ್ಣತೆ, ಕಡಿಮೆ ಅವಪಾತ, ಗಮನಾರ್ಹವಾದ ಮತ್ತು ದೀರ್ಘವಾದ ಶುಷ್ಕ ಋತು-ಇವು ಇದರ ಲಕ್ಷಣಗಳು. ಮಳೆಗಾಡು ಪ್ರದೇಶದ ಸುತ್ತ, ಓರಿನೋಕೊ ಕಣಿವೆ, ಬ್ರಜಿóಲ್ ಪ್ರಸ್ಥಭೂಮಿ, ಪಶ್ಚಿಮ ಎಕ್ವಡಾರ್‍ನ ಒಂದು ಭಾಗ ಇವು ಈ ವಾಯುಗುಣಕ್ಕೆ ಸೇರಿದವು. ಇಲ್ಲಿ ಉಷ್ಣತೆ 420 ಈ-630 ಈ ( 60 ಅ-17 0ಅ).

	ಸಮಶೀತೋಷ್ಣ ವಾಯುಗುಣ ಮಕರಸಂಕ್ರಾಂತಿ ವೃತ್ತದಿಂದ ದಕ್ಷಿಣಕ್ಕೆ-ಪರಗ್ವೇ, ಬೊಲಿವಿಯದ ಭಾಗಗಳು, ಬ್ರಜಿóಲ್, ಅರ್ಜೆಂಟೀನ, ಚಿಲಿಗಳಲ್ಲಿ- ಕಂಡುಬರುತ್ತದೆ. ಆಂಡೀಸ್ ಪರ್ವತ ಭಾಗಗಳಲ್ಲೂ ಈ ಬಗೆಯ ವಾಯುಗುಣವುಂಟು. ಅಟ್ಲಾಂಟಿಕ್ ಸಾಗರದ ಕಡೆ ಬೇಸಗೆಯ ಸರಾಸರಿ ಉಷ್ಣತೆ 770 ಈ (250 ಅ). ಚಳಿಗಾಲದಲ್ಲಿ ಉತ್ತರದಿಂದ ದಕ್ಷಿಣಕ್ಕೆ 630 ಈ (170 ಅ) ನಿಂದ 50 0ಈ (100 ಅ) ವರೆಗೆ ಉಷ್ಣತೆಯಲ್ಲಿ ವ್ಯತ್ಯಾಸವಾಗುತ್ತದೆ. ಮಳೆಯೂ ಪೂರ್ವದಿಂದ ಪಶ್ಚಿಮಕ್ಕೆ ಹೋದಂತೆ ಕಡಿಮೆಯಾಗುತ್ತದೆ. ಮಧ್ಯ ಚಿಲಿಯಲ್ಲಿ ದ.ಅ. 320 ಮತ್ತು 380 ನಡುವೆ ಮೆಡಿಟರೇನಿಯನ್ ಪ್ರರೂಪವನ್ನು ಹೋಲುವ ವಾಯುಗುಣವಿದೆ. ದಕ್ಷಿಣಚಿಲಿಯಲ್ಲಿ ಚಳಿಗಾಲದ ಉಷ್ಣತೆ ಕಡಿಮೆಯಾದರೂ ಅಲ್ಲಿಯ ದಕ್ಷಿಣ ಅಕ್ಷಾಂಶಕ್ಕೆ ಅನುಗುಣವಾದಷ್ಟು ಕಡಿಮೆಯಲ್ಲ. ದ್ವೀಪಗಳಲ್ಲೂ ಕಡಲ್ಗಾಲುವೆ ಪ್ರದೇಶದಲ್ಲೂ ವರ್ಷವೆಲ್ಲ ಉಷ್ಣತೆ ಹೆಚ್ಚು ಕಡಿಮೆ ಏಕರೀತಿಯಾಗಿರುತ್ತದೆ. ಉತ್ತರಾರ್ಧಗೋಳದಲ್ಲಿ ಸುಮಾರು ಇದೇ ಅಕ್ಷಾಂಶದಲ್ಲಿರುವ ಲ್ಯಾಬ್ರಡಾರಿನಲ್ಲಿ ಚಳಿಗಾಲ ಇಲ್ಲಿರುವುದಕ್ಕಿಂತ ತೀವ್ರವಾಗಿರುತ್ತದೆ. ವಾಲ್ಡಿವಿಯ, ಚಿಲಿಗಳಲ್ಲಿ 102 ಮಳೆಯಾಗುತ್ತದೆ. ಪರ್ವತಗಳ ಪಶ್ಚಿಮ ಇಳಿಜಾರುಗಳಲ್ಲಿ ಇದರ ಎರಡರಷ್ಟು ಮಳೆ. ಸ್ವಲ್ಪ ಒಳಭಾಗಕ್ಕೆ ಸಾಗಿದರೆ ಮಳೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

	ಆಂಡೀಸ್‍ಗೆ ಪೂರ್ವದ ಪ್ಯಾಟಗೋನಿಯ ಪ್ರದೇಶ ಮಳೆನೆರಳು ವಲಯದಲ್ಲಿದೆ. ಇಲ್ಲಿ ಮಳೆ ಬಲು ಕಡಿಮೆ, ವಾರ್ಷಿಕ ಉಷ್ಣತೆಯ ಅಂತರ 360 ಈ (200 ಅ) ದಕ್ಷಿಣ ಅಮೆರಿಕದಲ್ಲೇ ಇದು ಗರಿಷ್ಠ. ದ.ಅ. 50 ಮತ್ತು 310 ನಡುವೆ ಇರುವ ಪೆಸಿಫಿಕ್ ಕರಾವಳಿ ಪ್ರದೇಶ ಇನ್ನೊಂದು ಶುಷ್ಕವಲಯ. ಹಮ್ಬೋಲ್ಟ್ ಅಥವಾ ಪೆರು ಶೀತ ಪ್ರವಾಹದಿಂದ ಕೂಡಿದ ಸಮುದ್ರಕ್ಕೂ ಉನ್ನತವಾದ ಆಂಡೀಸ್‍ಗೂ ಸಮೀಪದಲ್ಲಿರುವುದರಿಂದಾಗಿ ಇಲ್ಲಿಯ ವಾತಾವರಣ ಮತ್ತು ಪ್ರಸಾಮಾನ್ಯ ಉಷ್ಣತೆಯಲ್ಲಿ ಏರುಪೇರಾಗುತ್ತದೆ. ಉನ್ನತ ಶ್ರೇಣಿಯಲ್ಲಿರುವ ವಾಯುವಿಗಿಂತ ಸಮುದ್ರದ ಸಮೀಪದ ವಾಯು ಶೀಘ್ರವಾಗಿ ತಣ್ಣಗಾಗುತ್ತದೆ. ಇದರಿಂದಾಗಿ 1,000 ಅಡಿಗಳಿಂದ 3,000 ಅಡಿಗಳವರೆಗಿನ ಎತ್ತರದಲ್ಲಿ ಸುಮಾರು 1,200 ಅಡಿಗಳ ದಪ್ಪದ ಮೋಡದ ಪದರವೊಂದು ಉಂಟಾಗುತ್ತದೆ. ಇದರಿಂದ ನೆಲದ ಬಳಿಯ ವಾಯು ಬಿಸಿಯಾಗಲು ಆಸ್ಪದವಿಲ್ಲದಂತಾಗುತ್ತದೆ. ಆದ್ದರಿಂದ ಉಷ್ಣತೆ ಯಾವಾಗಲೂ ಕಡಿಮೆಯಾಗಿರುತ್ತದೆ. ಪೆರುವಿನ ಕರಾವಳಿ ಪ್ರದೇಶ ಪ್ರಪಂಚದ ಅತ್ಯಂತ ಮೇಘಾಚ್ಛಾದಿತ ಮರುಭೂಮಿ. ವರ್ಷಕ್ಕೆ ಆರು ತಿಂಗಳು ಬಿಸಿಲು ಬೀಳುವುದಿಲ್ಲ. ಸಾಮಾನ್ಯವಾಗಿ ಮಳೆ ಆಗುವುದೇ ಇಲ್ಲ. ಮಂಜಿನಿಂದ ಸ್ವಲ್ಪ ಆದ್ರ್ರತೆ ಉಂಟಾಗುತ್ತದೆಯಷ್ಟೆ. ಈಶಾನ್ಯ ಕೊಲಂಬಿಯದಿಂದ ವೆನಿಜ್ವೇಲದ ವರೆಗೂ ಮರುಭೂಮಿ ಹಬ್ಬಿದೆ. ಮತ್ತೊಂದು ಶುಷ್ಕವಲಯ ಇರುವುದು ಈಶಾನ್ಯ ಬ್ರಜಿಲಿನಲ್ಲಿ-ಪರ್ನಯೀಬಾ ಮತ್ತು ಸಾವ್‍ಫ್ರನ್ಸಿಸ್ಕೋ ನದಿಗಳ ನಡುವೆ, ಒಳನಾಡಿನ ಬೆಟ್ಟಸೀಮೆಯಿಂದಾಗಿ ಈಶಾನ್ಯದಿಂದಲೂ ಆಗ್ನೇಯದಿಂದಲೂ ಸಮುದ್ರ ಮಾರುತಗಳು ಬೀಸದಂತೆ ತಡೆಯುಂಟಾಗುತ್ತದೆ. ವಾರ್ಷಿಕ ಸರಾಸರಿ ಮಳೆ 4 ಗಿಂತ ಕಡಿಮೆ.

	ವಾರ್ಷಿಕ ಸರಾಸರಿ ಉಷ್ಣತೆ 500 ಈ (100 ಅ) ಗಿಂತ ಕಡಿಮೆ ಇರುವ ಶೀತ ವಾಯುಗುಣವನ್ನು ಆರ್ಜೆಂಟೀನ ಮತ್ತು ಚಿಲಿಯ ದಕ್ಷಿಣ ತುದಿಯಲ್ಲೂ ಆಂಡೀಸ್‍ನಲ್ಲಿ 11,500 ಅಡಿಗಳಿಗಿಂತ ಎತ್ತರದಲ್ಲೂ ಕಾಣಬಹುದು.

	ಸಸ್ಯಪ್ರಾಣಿವರ್ಗ : ದಕ್ಷಿಣ ಅಮೆರಿಕದ ಸಸ್ಯಪ್ರಾಣಿಜೀವನ ವಿಶಿಷ್ಟವಾದ್ದು. ಟರ್ಷಿಯರಿ ಯುಗದಲ್ಲಿ ಆಸ್ಟ್ರೇಲಿಯದಂತೆ ಇದೂ ಪ್ರಪಂಚದ ಇತರ ಭಾಗಗಳಿಂದ ಪ್ರತ್ಯೇಕವಾಗಿದ್ದುದು ಈ ವಿಶಿಷ್ಟತೆಗೆ ಕಾರಣ. ಇಲ್ಲಿಯ ಸಸ್ಯಗಳೂ ಪ್ರಾಣಿಗಳೂ ಹಲವು ಬಗೆಯ ಸಂಬಂಧಗಳ ಮಿಶ್ರಣಗಳ ಫಲ. ಇಲ್ಲಿಯ ಸಸ್ಯ ಪ್ರಾಣಿಗಳ ಅನೇಕ ಪ್ರಾಚೀನ ಗುಂಪುಗಳಿಗೂ ಆಫ್ರಿಕ, ಆಸ್ಟ್ರೇಲಿಯ, ನ್ಯೂಜೀಲೆಂಡ್ ಮುಂತಾದವುಗಳಲ್ಲಿರುವವಕ್ಕೂ ಸಾಮ್ಯವಿದೆ. ಈಚೆಗೆ ಟರ್ಷಿಯರಿ ಯುಗದ ಕೊನೆಯಲ್ಲಿ ಮತ್ತು ಪ್ಲೀಸ್ಟೋಸೀನ್ ಯುಗದಲ್ಲಿ ಉತ್ತರ ಅಮೆರಿಕದಿಂದಲೋ ಅದರ ಮೂಲಕವೋ ಬಂದಂಥ ಪ್ರಾಣಿಗಳೂ ಇವೆ. ಬಹುತೇಕ ಇವು ಕಶೇರುಕಗಳು.

	ದಕ್ಷಿಣ ಅಮೆರಿಕ ಖಂಡದೊಳಗೆ ಸಸ್ಯಪ್ರಾಣಿ ವರ್ಗಗಳ ವಿತರಣೆಯ ವಿನ್ಯಾಸ ವೈವಿಧ್ಯಮಯವಾದ್ದು. ವಾಯುಗುಣ ಹಾಗೂ ಪರಿಸರಗಳ ವಿಭಿನ್ನತೆ ಇದಕ್ಕೆ ಕಾರಣ. ಉತ್ತರದಲ್ಲಿರುವ ಉಷ್ಣವಲಯ ಪ್ರದೇಶಗಳು ಸಂಪದ್ಯುಕ್ತವಾದಂಥವು. ದಕ್ಷಿಣ ಭಾಗ ಹಾಗೂ ಆಂಡೀಸ್ ಪ್ರದೇಶ ವಿರಳಯುಕ್ತ.

	ದಕ್ಷಿಣ ಅಮೆರಿಕದ ಸಸ್ಯವರ್ಗದ ಉಗಮ ನಾನಾ ತೆರನಾದ್ದು, ಸ್ಥಳಿಕ ಸಸ್ಯಗಳ ಪ್ರಮಾಣ ಬಹಳ ಅಧಿಕ. ಕುಟುಂಬ ಮಟ್ಟದಲ್ಲೂ ಇದನ್ನು ಕಾಣಬಹುದು. ಹೂ ಬಿಡುವ ಸಸ್ಯಗಳ ಪೈಕಿ 25ಕ್ಕೆ ಕಡಿಮೆಯಿಲ್ಲದಷ್ಟು ಕುಟುಂಬಗಳು ಹಾಗೂ 3,500ಕ್ಕೆ ಕಡಿಮೆಯಿಲ್ಲದಷ್ಟು ಜಾತಿಗಳು ಉಪೋಷ್ಣವಲಯ ಪ್ರದೇಶಗಳಿಗೆ ಸ್ಥಳಿಕವಾದಂಥವು. ಉಳಿದವು ಆಫ್ರಿಕನ್ ಸಸ್ಯ ಸಂಬಂಧಿಗಳು, ಇಲ್ಲವೇ ದಕ್ಷಿಣ ಸಸ್ಯಗುಂಪುಗಳಿಗೆ ಸೇರಿದಂಥವು. ಈ ಗುಂಪುಗಳು ದಕ್ಷಿಣ ಆಫ್ರಿಕದಲ್ಲಿ ಹಾಗೂ ಆಸ್ಟ್ರೇಲಿಯದಲ್ಲಿ ಹರಡಿವೆ.

	ದಕ್ಷಿಣ ಅಮೆರಿಕದ ಸಸ್ಯವರ್ಗವನ್ನು ಉಷ್ಣವಲಯದ ಮತ್ತು ಉಪೋಷ್ಣವಲಯದ ಮಳೆ ಕಾಡುಗಳು, ಉಷ್ಣವಲಯದ ಪರ್ಣಪಾತಿ ಕಾಡುಗಳು, ಕಾಟಿಂಗ, ಜೆóರೊಫೈಟಿಕ್ ಸಸ್ಯಗಳು, ಉಪ ಅಂಟಾರ್ಕ್‍ಟಿಕ್ ಬೀಚ್ ಕಾಡುಗಳು, ಸವಾನ, ಪಂಪಾಸ್, ಪರ್ವತ ಸಸ್ಯ-ಎಂದು ವಿಂಗಡಿಸಬಹುದು. ಉಷ್ಣ ಹಾಗೂ ಉಪೋಷ್ಣವಲಯ ಮಳೆಗಾಡುಗಳು ಆಮೆಜಾನ್ ಪ್ರದೇಶದ ಬಹುಭಾಗದಲ್ಲೂ ಬಹುತೇಕ ಗಿಯಾನಗಳಲ್ಲೂ ದಕ್ಷಿಣ ಮತ್ತು ಪೂರ್ವ ವೆನಿಜ್ವೇಲದಲ್ಲೂ ಬ್ರಜಿಲ್ ಪ್ರಸ್ಥಭೂಮಿಯ ಅಟ್ಲಾಂಟಿಕ್ ಕಡೆಯ ಇಳಿಜಾರುಗಳಲ್ಲೂ ಕೊಲಂಬಿಯದ ಪೆಸಿಫಿಕ್ ತೀರದಲ್ಲೂ ಉತ್ತರ ಎಕ್ವಡಾರ್‍ನಲ್ಲೂ ಇವೆ. ಅಮೆಜಾನ್ ಪ್ರದೇಶ ಪ್ರಪಂಚದ ಅತಿ ದೊಡ್ಡ ಹಾಗೂ ಬಹುಶಃ ಅತ್ಯಂತ ಪ್ರಾಚೀನ ಅರಣ್ಯ ಪ್ರದೇಶ. ಇದು ಆಂಡೀಸ್ ಪರ್ವತದಲ್ಲೂ ಮುಂದುವರಿದು ಉಪೋಷ್ಣವಲಯದ ಮತ್ತು ಸಮಶೀತೋಷ್ಣವಲಯದ ಮಳೆಗಾಡಿನೊಂದಿಗೆ ಬೆರೆತುಕೊಳ್ಳುತ್ತದೆ. ಉಷ್ಣವಲಯದ ಪರ್ಣಪಾತಿ ಕಾಡುಗಳು ದಕ್ಷಿಣ ಅಮೆರಿಕದ ಉತ್ತರ ಭಾಗದಲ್ಲಿ ವ್ಯಾಪಕವಾಗಿ ಹರಡಿವೆ. ವೆನಿಜ್ವೇಲ, ಕೊಲಂಬಿಯ ಮತ್ತು ಬ್ರಜಿಲ್ ಪ್ರಸ್ಥಭೂಮಿಯಲ್ಲಿ ಇವು ಸಾಮಾನ್ಯ. ತಕ್ಕಮಟ್ಟಿಗೆ ದೀರ್ಘವಾದ ಶುಷ್ಕ ವಾಯುಗುಣ ಇರುವಲ್ಲಿ ಈ ಕಾಡುಗಳಿವೆ. ಕುಬ್ಜವಾದ, ತಕ್ಕಮಟ್ಟಿಗೆ ವಿರಳವಾದ, ಮುಳ್ಳಿನಿಂದ ಕೂಡಿದ ಮರಗಳು ಕಾಟಿಂಗದ (ಬಿಳಿ ಕಾಡು) ವೈಶಿಷ್ಟ್ಯ. ವರ್ಷದಲ್ಲಿ ಹೆಚ್ಚು ಕಾಲ ಇವು ಪರ್ಣರಹಿತವಾಗುತ್ತವೆ. ಅನಾವೃಷ್ಟಿಯನ್ನು ಎದುರಿಸುವ ಶಕ್ತಿ ಹೊಂದಿರುತ್ತವೆ. ಈಶಾನ್ಯ ಬ್ರಜಿóಲ್‍ನಲ್ಲಿ ಇಂಥ ಸಸ್ಯ ಸಾಮಾನ್ಯ. ದಕ್ಷಿಣ ಬ್ರಜಿಲ್ ಕಾಡುಗಳು ಉಪವನವನ್ನು ಹೋಲುತ್ತವೆ. ಕೆಲವೆಡೆ ಮರಗಳು ಒತ್ತಾಗಿವೆ. ಆದರೆ ನಡುನಡುವೆ ಸವಾನ ಹುಲ್ಲುಗಾವಲು ಇರುತ್ತದೆ; ಆಮೆಜಾನ್ ಮಳೆಗಾಡಿನ ಅಂಚಿನಿಂದ ಪರಗ್ವೇ ನದಿಯ ಮೇಲ್ದಂಡೆಯವರೆಗೂ ಹಬ್ಬಿದೆ. ಹುಲ್ಲುಗಾವಲು, ಅಲ್ಲಲ್ಲಿ ಎರಚಿದಂತೆ ಸಣ್ಣ ಮರಗಳು ಇವು ಇದರ ಮುಖ್ಯಲಕ್ಷಣಗಳು. ಒಣಹವೆಯ ಸಸ್ಯಗಳು-ಕುರುಚಲು ಗಿಡಗಳು ಪೊದೆಗಳು ಮುಳ್ಳುಗಿಡಗಳು ಮುಂತಾದವು-ನಡುನಡುವೆ ಸ್ವಲ್ಪ ಆದ್ರ್ರತೆಯಿಂದ ಕೂಡಿದ ಶುಷ್ಕ ವಾಯುಗುಣಗಳಲ್ಲಿ ಬೆಳೆಯುತ್ತವೆ. ವೆನಿಜ್ವೇಲ ಕರಾವಳಿ, ಈಶಾನ್ಯ ಕೊಲಂಬಿಯ, ನೈಋತ್ಯ ಎಕ್ವಡಾರ್, ಉತ್ತರ ಪೆರುಗಳಲ್ಲಿ ಈ ಬಗೆಯ ಸಸ್ಯಗಳಿವೆ. ಪೆರುವಿನಲ್ಲಿ ಈ ಪ್ರರೂಪಿ ಸಸ್ಯಗಳು ಮರುಭೂಮಿಯ ಕಡೆಗೆ ತೆಳುವಾಗುತ್ತ ಸಾಗಿ ಕೊನೆಗೆ ಅದೃಶ್ಯವಾಗುತ್ತವೆ. ಉಪ ಆಂಟಾರ್ಕಟಿಕ್ ಬೀಚ್ ಕಾಡುಗಳು ಸಮಶೀತೋಷ್ಣ ಮಳೆಗಾಡುಗಳು. ಈ ಕಾಡುಗಳು ದಕ್ಷಿಣ ಚಿಲಿಯಲ್ಲಿವೆ. ವೆನಿಜ್ವೇಲದ ಓರಿನೋಕೋ ನದೀ ಬಯಲಿನಲ್ಲಿ ಸವಾನ ಹುಲ್ಲುಗಾವಲೂ ಪೂರ್ವ ಆರ್ಜೆಂಟೀನದಲ್ಲಿ ಪಂಪಾಸ್ ಹುಲ್ಲುಗಾವಲೂ ಇವೆ. ಪಂಪಾಸ್ ಪ್ರದೇಶದ ದಕ್ಷಿಣದಲ್ಲಿರುವುದು ಪ್ಯಾಟಗೋನಿಯನ್ ಸ್ಟೆಪ್ (ಹುಲ್ಲುಗಾವಲು). ಆಂಡೀಸ್ ಪರ್ವತದಲ್ಲಿ ಉಪೋಷ್ಣವಲಯದ ಮಳೆಗಾಡಿನ ಅಂಚಿನಲ್ಲಿ 6,000 ಅಡಿಗಳಿಗಿಂತ ಎತ್ತರಕ್ಕೆ, 10,500-12,500 ಅಡಿಗಳ ವರೆಗೆ, ಸಮಶೀತೋಷ್ಣವಲಯದ ವಾಯುಗುಣವಿದೆ. ಅಮೆಜಾನ್ ನದಿಯ ಕಡೆಗೆ ಈ ಪ್ರದೇಶ ತೇವವಾಗಿದೆ. ಇಲ್ಲಿ ಅಪ್ಪು ಸಸ್ಯಗಳು ಬೆಳೆಯುತ್ತವೆ. ಮರಗಳು ಒತ್ತಾಗಿರುತ್ತವೆ. ಇನ್ನೂ ಎತ್ತರದಲ್ಲಿ ಹಿಮರೇಖೆಯ ವರೆಗೂ ಆಯಾ ಪ್ರದೇಶಗಳಿಗೆ ವಿಶಿಷ್ಟವಾದ ಸಸ್ಯಗಳನ್ನು ಕಾಣಬಹುದು.

	ದಕ್ಷಿಣ ಅಮೆರಿಕದ ಪ್ರಾಣಿಜೀವನವೂ ವೈವಿಧ್ಯಪೂರಿತವಾದ್ದು. ಪ್ರಪಂಚದ ಉಳಿದ ಭಾಗದಲ್ಲಿ ತಕ್ಕಮಟ್ಟಿಗೆ ಹರಡಿರುವ ಪ್ರಾಣಿಗುಂಪುಗಳು ಅಲ್ಲಿ ಕಾಣಬರುವುದಿಲ್ಲ. ಬಹುಕಾಲ ಈ ಖಂಡ ಪ್ರತ್ಯೇಕವಾಗಿದ್ದುದರ ಪರಿಣಾಮ ಇದು. ಹಲವು ಪ್ರತ್ಯೇಕ ಗುಂಪುಗಳು ಇಲ್ಲಿವೆ. ಕುಟುಂಬ ಮಟ್ಟದಲ್ಲೂ ಸ್ಥಳಿಕ ರೂಪಗಳ ಪ್ರಮಾಣ ಅಧಿಕ. ಸಸ್ಯ ವಲಯಗಳಿಗೆ ಅನುಗುಣವಾಗಿ ಪ್ರಾಣಿಗಳ ಹಂಚಿಕೆಯಾಗಿದೆ. ಅಮೆಜಾನ್ ಪ್ರರೂಪಿ ಕಾಡುಗಳಲ್ಲಿರುವ ಪ್ರಾಣಿಗಳು ಮರಗಪ್ಪೆ, ಹಲ್ಲಿ, ಕೋತಿ, ಪೋಟೋ, ಕಿಂಕಜಾನ್ ಇತ್ಯಾದಿ. ಪಕ್ಷಿಗಳೂ ಅನೇಕ ಬಗೆ: ಇರುವೆ ಹಿಡುಕ, ಟೈರಂಟ್, ಕೋಟಿಂಗ, ಟಂಗಾರ, ಝೇಂಕಾರ ಪಕ್ಷಿ, ಟೌಕಾನ್, ಮರಕುಟುಕ, ಗಿಳಿ ಮುಂತಾದವು. ಬ್ರಜಿಲ್ ಪ್ರಸ್ಥಭೂಮಿಯಲ್ಲಿ ಹೆಚ್ಚು ಪ್ರಾಣಿಗಳಿಲ್ಲ. ಉರಗ್ವೇ ಮತ್ತು ಗ್ರಾನ್ ಚಾಕೋ ಬಯಲುಗಳಲ್ಲಿ ಕೇಸರವಿರುವ ತೋಳವೂ ಜವುಗು ನೆಲದಲ್ಲಿ ನೀರುಕೋಳಿ ಮತ್ತು ಫುಪ್ಪುಸ ಮೀನೂ ಇವೆ. ಆರ್ಜೆಂಟೀನದ ಪಂಪಾಸ್‍ನಲ್ಲಿ ಇರುವ ಪ್ರಾಣಿಗಳು ಮತ್ತು ಹಕ್ಕಿಗಳು ಕೆಲವು ಮಾತ್ರ: ರ್ಹೀಯ, ಒಲೆಹಕ್ಕಿ, ಗ್ವಾನಾಕೋ ಮುಂತಾದವು. ದಕ್ಷಿಣ ಚಿಲಿಯ ಕಾಡುಗಳಲ್ಲಿ ವಿಶಿಷ್ಟವಾದ ಪ್ರಾಣಿಗಳಿವೆ. ಸ್ಥಳಿಕವಾದವುಗಳ ಪ್ರಮಾಣ ಅಧಿಕ. ಗಿಳಿ, ಝೇಂಕಾರ ಪಕ್ಷಿ-ಇವು ದಕ್ಷಿಣದ ತುದಿಯಲ್ಲೂ ಇವೆ. ಅಲ್ಲಿ ಈಗಲೂ ಕೆಲವು ಅತ್ಯಂತ ಪುರಾತನ ಕಶೇರುಕಗಳು ಇವೆ. ಆಂಡೀಸ್ ಪರ್ವತಗಳ ಸರೋವರಗಳು ಅನೇಕ ಬಗೆಯ ಜಲಪಕ್ಷಿಗಳನ್ನು ಆಕರ್ಷಿಸಿವೆ. ರಾಜಹಂಸಗಳು ಉತ್ತರಚಿಲಿಯಲ್ಲಿ 16,000 ಅಡಿ ಎತ್ತರದಲ್ಲೂ ಗೂಡು ಕಟ್ಟುತ್ತವೆ. ಭೂತಾಕಾರದ ಕಪ್ಪೆಗಳೇ ಮುಂತಾದ ದ್ವಿಚರಿಗಳು ಟಿಟಿಕಾಕ ಸರೋವರದಲ್ಲಿವೆ. ಗ್ವಾನಾಕೋ, ಜಿಂಕೆ, ದಂಶಕಗಳು, ಗಿನಿಯಿಲಿ, ನರಿ, ಪ್ಯೂಮ, ಕಾಂಡಾರ್ ಹದ್ದು ಮುಂತಾದವು ಉಂಟು. ಪೆರು ಮತ್ತು ಉತ್ತರ ಚಿಲಿಯ ಪಶ್ಚಿಮ ತೀರದ ಶುಷ್ಕ ಪ್ರದೇಶದಲ್ಲಿ ಹೆಚ್ಚು ಪ್ರಾಣಿಗಳಿಲ್ಲ. ಆದರೆ ನೆರೆಯ ಸಮುದ್ರ ಅನೇಕ ಬಗೆಯ ಜಲಚರಗಳಿಂದ ತುಂಬಿದೆ. ಅಲ್ಲಿಯ ಪಕ್ಷಿಗಳಲ್ಲಿ ಮುಖ್ಯವಾದವು ಪೆಂಗ್ವಿನ್, ಕಡಲು ಕಾಗೆ, ಟರ್ನ್, ನೀರ್ಸೀಳಕ್ಕಿ, ಪೆಟ್ರೆಲ್, ನೀರು ಕಾಗೆ, ಪೆಲಿಕನ್ ಮತ್ತು ಬೂಬಿ.

	ಖನಿಜಗಳು : ದಕ್ಷಿಣ ಅಮೆರಿಕದಲ್ಲಿ ಅನೇಕ ಖನಿಜಗಳು ದೊರೆತರೂ ಕಲ್ಲಿದ್ದಲ್ಲು ಸಿಗದಿರುವುದರಿಂದ ಕೈಗಾರಿಕೆಗಳ ಬೆಳೆವಣಿಗೆ ಸಾಧ್ಯವಾಗಿಲ್ಲ. ಆ ಖನಿಜಗಳು ಹೆಚ್ಚಾಗಿ ರಫ್ತಾಗುತ್ತವೆ.

	ಆಂಡೀಸ್ ಪರ್ವತ ಪ್ರದೇಶದಲ್ಲೇ ಹೆಚ್ಚಾಗಿ ಖನಿಜ ನಿಕ್ಷೇಪಗಳಿವೆ. ದಕ್ಷಿಣ ಎಕ್ವಡಾರ್‍ನಿಂದ ಮಧ್ಯ ಚಿಲಿಯ ವರೆಗೆ ನಿಕ್ಷೇಪಗಳು ಹರಡಿವೆ. ಎಕ್ವಡಾರ್‍ನಲ್ಲಿ ಚಿನ್ನ, ಬೆಳ್ಳಿ; ಪೆರುವಿನಲ್ಲಿ ತಾಮ್ರ, ಬೆಳ್ಳಿ, ಚಿನ್ನ, ಸತು; ಬೊಲಿವಿಯದಲ್ಲಿ ತಾಮ್ರ, ತವರ, ಬೆಳ್ಳಿ; ಚಿಲಿಯಲ್ಲಿ ತಾಮ್ರ ಮತ್ತು ಬೆಳ್ಳಿ-ಇವು ಮುಖ್ಯ ಖನಿಜಗಳು. ಇಲ್ಲಿಯ ಗಣಿಗಾರಿಕೆ ಹೆಚ್ಚಾಗಿ ವಿದೇಶೀ ಬಂಡವಾಳದಿಂದಲೇ ನಡೆಯುತ್ತದೆ. ಇದರ ಪಶ್ಚಿಮ ತೀರದಲ್ಲಿರುವ ಪೆರುವಿನಲ್ಲಿ ತೈಲ, ನೈಟ್ರೇಟ್ ಮತ್ತು ಕಬ್ಬಿಣ ಅದುರು ಸಿಗುತ್ತವೆ.

	ವಾಯುವ್ಯದಲ್ಲಿ ವೆನಿಜ್ವೇಲ ಮತ್ತು ಕೊಲಂಬಿಯ ಇವುಗಳದು ಎರಡನೆಯ ಮುಖ್ಯ ಗಣಿ ಪ್ರದೇಶ. ವೆನಿಜ್ವೇಲ ಪ್ರಪಂಚದ ಪ್ರಮುಖ ತೈಲೋತ್ಪಾದಕ ದೇಶಗಳಲ್ಲಿ ಒಂದು. ಪ್ರಪಂಚದ ತೈಲೋತ್ಪತ್ತಿಯಲ್ಲಿ ಸೇ. 10 ರಷ್ಟು ಈ ಪ್ರದೇಶದಿಂದ ಬರುತ್ತದೆ. ವೆನಿಜ್ವೇಲದ ಗಿಯಾನ ಪ್ರಸ್ಥಭೂಮಿಯಲ್ಲಿ ಚಿನ್ನ ಮತ್ತು ವಜ್ರ ದೊರಕುತ್ತವೆ. ಇಲ್ಲಿ ಹೇರಳವಾಗಿ ಕಬ್ಬಿಣದ ಅದುರಿನ ನಿಕ್ಷೇಪಗಳೂ ಇವೆ.

	ಬ್ರಜಿûಲ್ ಪ್ರಸ್ಥಭೂಮಿ ಮೂರನೆಯ ಮುಖ್ಯ ಖನಿಜ ಪ್ರದೇಶ; ಉತ್ತಮ ದರ್ಜೆಯ ವಜ್ರ, ಚಿನ್ನ, ಕಬ್ಬಿಣ ಅದುರು ದೊರಕುತ್ತವೆ. ಇಲ್ಲಿ ಮ್ಯಾಂಗನೀಸ್ ಮತ್ತು ಇತರ ಲೋಹಗಳೂ ದೊರೆಯುತ್ತವೆ.

	ಉಳಿದ ಕಡೆಗಳಲ್ಲೂ ಅಲ್ಲಲ್ಲಿ ಖನಿಜ ನಿಕ್ಷೇಪಗಳಿವೆ. ದಕ್ಷಿಣ ಬ್ರಜಿಲ್ ಮತ್ತು ಮಧ್ಯ ಚಿಲಿಗಳಲ್ಲಿ ಕಲ್ಲಿದ್ದಲು, ಆರ್ಜಿಂಟೀನದಲ್ಲಿ ತೈಲ ದೊರಕುತ್ತವೆ.

	ಕೃಷಿ : ವ್ಯವಸಾಯ ಈ ಖಂಡದ ಮುಖ್ಯ ಕಸಬು. ಅತ್ಯಂತ ಪ್ರಾಚೀನವಾದ ಕೃಷಿ ಪದ್ಧತಿಯಿಂದ ಅತ್ಯಾಧುನಿಕವಾದ್ದರ ವರೆಗೆ ನಾನಾ ಬಗೆಯ ಕೃಷಿ ಪದ್ಧತಿಗಳನ್ನಿಲ್ಲಿ ಕಾಣಬಹುದು, ವಾಣಿಜ್ಯ ಬೆಳೆಗಳ ವ್ಯವಸಾಯ ಪೂರ್ವತೀರದಲ್ಲಿ ಹೆಚ್ಚು. ಆದಾಗ್ಯೂ ಖಂಡದ ವಿಶಾಲತೆಗೆ ತಕ್ಕಷ್ಟು ವ್ಯವಸಾಯ ಪ್ರದೇಶಗಳಿಲ್ಲ. ಅಭಿವೃದ್ಧಿ ಹೊಂದಬಹುದಾದ ಪ್ರದೇಶಗಳು ಅನೇಕವಿವೆ. ಸದ್ಯದಲ್ಲಿ ಕೆಲವೆಡೆ ಮಾತ್ರ ಬೇಸಾಯ ನಡೆಯುತ್ತದೆ.

	ಖಂಡದ ಮುಖ್ಯ ಬೆಳೆ ಗೋದಿ. ಪ್ರಪಂಚದ ಉಗ್ರಾಣಗಳಲ್ಲಿ ಒಂದಾದ ಉತ್ತರ ಆರ್ಜೆಂಟೀನದಲ್ಲಿ ಸೂಕ್ತ ವಾಯುಗುಣ ಹಾಗೂ ಭೂಗುಣಗಳಿರುವುದರಿಂದ ಇದನ್ನು ಅಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಚಿಲಿ, ಉರಗ್ವೇ, ಪರಗ್ವೇ, ಬೊಲಿವಿಯ, ಪೆರು, ಕೊಲಂಬಿಯ ಮತ್ತು ವೆನಿಜ್ವೇಲಗಳಲ್ಲೂ ಗೋದಿ ಬೆಳೆಯುತ್ತದೆ.

	ಬ್ರಜಿಲ್‍ನಲ್ಲಿ ಬೆಳೆಯುವಷ್ಟು ಕಾಫಿ ಜಗತ್ತಿನಲ್ಲಿ ಬೇರೆಲ್ಲೂ ಬೆಳೆಯುವುದಿಲ್ಲ. ಪ್ರಪಂಚದಲ್ಲಿ ಹೆಚ್ಚು ಕಾಫಿ ಬೆಳೆಯುವ ಎರಡನೆಯ ದೇಶ ಕೊಲಂಬಿಯ.

	ವಿಶಿಷ್ಟವಾದ ಚಹ ಸೊಪ್ಪನ್ನು ಪರಗ್ವೇಯಲ್ಲಿ ಬೆಳೆಯುತ್ತಾರೆ. ಬ್ರಜಿಲ್, ವೆನಿಜ್ವೇಲ, ಕೊಲಂಬಿಯ, ಎಕ್ವಡಾರ್ ಮತ್ತು ಪೆರುಗಳಲ್ಲಿ ಕೋಕೋ ಬೆಳೆಯುತ್ತದೆ. ಕೋಕೋ ಬೆಳೆಯಲ್ಲಿ ಬ್ರಜಿಲಿನದು ಜಗತ್ತಿನಲ್ಲಿ ಎರಡನೆಯ ಸ್ಥಾನ. ಬ್ರಜಿಲಿನ ಮತ್ತೊಂದು ಮುಖ್ಯ ಬೆಳೆ ರಬ್ಬರ್. ಪರಗ್ವೇ ಮತ್ತು ಅರ್ಜಿಂಟೀನಗಳಲ್ಲಿ ತಂಬಾಕನ್ನು ಬೆಳೆಯುತ್ತಾರೆ. ವಾಯವ್ಯ ಬ್ಯೂನಸ್ ಏರಿಸ್ ಪ್ರದೇಶದಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆ.

	ಪಶುಪಾಲನೆ : ಪ್ಯಾಟಗೋನಿಯ, ಉತ್ತರ ಅರ್ಜೆಂಟೀನ, ಉರಗ್ವೇ, ಪರಗ್ವೇ, ಬೊಲಿವಿಯ, ಬ್ರಜಿಲ್ ಪ್ರಸ್ಥಭೂಮಿಯ ಒಳ ಅಂಚು, ಆಂಡೀಸ್‍ನಿಂದ ವೆನಿಜ್ವೇಲದ ಮೈದಾನದ ವರೆಗಿನ ಪರ್ವತಪ್ರದೇಶಗಳಲ್ಲಿ ಪಶುಪಾಲನೆ ಹೆಚ್ಚು. ಪ್ಯಾಟಗೋನಿಯದಲ್ಲಿ ಕುದುರೆಗಳನ್ನೂ ಕುರಿಗಳನ್ನೂ ಸಾಕುತ್ತಾರೆ. ಪಶುಪಾಲನೆ ವಿಶೇಷವಾಗಿರುವ ಅರ್ಜೆಂಟೀನ ಮತ್ತು ಉರಗ್ವೇಗಳಲ್ಲಿ ಅದಕ್ಕೆ ಸಂಬಂಧಿಸಿದ ಕೈಗಾರಿಕೆಗಳಿವೆ. ಆಂಡೀಸ್ ಪರ್ವತದ ಬುಡದ ವರೆಗೂ ಇರುವ ಲಪ್ಲಾಟಾ ಪಾರನಾ ತಗ್ಗು ಬಯಲು ಪ್ರದೇಶದ ವಿಶಾಲ ಹುಲ್ಲುಗಾವಲುಗಳಲ್ಲಿ ಅಲ್ಫಾಲ್ಫಾ ಹುಲ್ಲು ಹೆಚ್ಚಾಗಿ ಬೆಳೆಯುತ್ತದೆ. ಪಂಪಾಸ್‍ನಲ್ಲಿ ಸೇ 40 ಭಾಗದಷ್ಟು ನೆಲ ಪಶುಪಾಲನೆಗೆ ಮೀಸಲಾಗಿದೆ. ಒಳಭಾಗದಲ್ಲಿ ಸೇ. 90 ಕ್ಕಿಂತಲೂ ಹೆಚ್ಚು ಭಾಗ ಪಶುಪಾಲನೆಗೆ ಒದಗಿಬಂದಿದೆ. ಇಲ್ಲಿ ವಿಶಾಲವಾದ ಗೋಮಾಳಗಳಿವೆ.        							
(ಕೆ.ಆರ್.ಆರ್.)

	ಸಾರಿಗೆ : ದಕ್ಷಿಣ ಅಮೆರಿಕದಂಥ ದೊಡ್ಡ ಖಂಡಕ್ಕೆ ಅನುಗುಣವಾಗಿ ಸಾರಿಗೆ ವ್ಯವಸ್ಥೆ ಬೆಳೆದಿಲ್ಲ. ಖಂಡದಲ್ಲಿ ಅನೇಕ ಪ್ರತ್ಯೇಕ ರಸ್ತೆ ಮತ್ತು ರೈಲ್ವೆ ವ್ಯವಸ್ಥೆಗಳಿವೆ. ಈಚೆಗೆ ಆಂತರಿಕ ಹಾಗೂ ಅಂತರರಾಷ್ಟ್ರೀಯ ವಾಯುಮಾರ್ಗಗಳು ಖಂಡದ ಏಕತೆ ಸಾಧಿಸಲು ಸಹಾಯಕವಾಗಿವೆ.

	ಒಳನಾಡಿನ ಜಲಮಾರ್ಗಗಳು ಅನೇಕ ಪ್ರತಿಕೂಲ ಪರಿಸ್ಥಿತಿಗಳಿಗೆ ಒಳಪಟ್ಟಿವೆ. ಹಲವು ನದಿಗಳಲ್ಲಿ ವರ್ಷದಲ್ಲಿ ಕೆಲಕಾಲ ಸಾಕಷ್ಟು ಹರಿವು ಇರುವುದಿಲ್ಲ. ಪ್ರವಾಹಗಳ ದಿಕ್ಕೂ ಅನುಕೂಲವಾಗಿರುವುದಿಲ್ಲ. ಅಲ್ಲಲ್ಲಿ ನದಿಗಳು ವೇಗವಾಗಿ ಹರಿಯುತ್ತವೆ.

	ಅಂತರರಾಷ್ಟ್ರೀಯ ದೃಷ್ಟಿಯಿಂದ ಪ್ರಮುಖವಾದ ಜಲಮಾರ್ಗ ವ್ಯವಸ್ಥೆಗಳು ಎರಡು: 1. ಪಾರನಾ-ಉರಗ್ವೇ ವ್ಯವಸ್ಥೆ. ಇದು ನಾಲ್ಕು ದೇಶಗಳಲ್ಲಿ ಹರಡಿದೆ. 2. ಆಮೆಜಾನ್ ಕಣಿವೆ. ಇದು ಆರು ದೇಶಗಳಲ್ಲಿ ವ್ಯಾಪಿಸಿದೆ. ಇವುಗಳಲ್ಲಿ ಒಂದೊಂದೂ ಹಲವು ಸಾವಿರ ಮೈಲಿಗಳ ದೂರ ಯಾನಯೋಗ್ಯವಾಗಿದೆ. ಕೊಲಂಬಿಯದಲ್ಲಿ ಮ್ಯಾಗ್ಡಲೀನ, ವೆನಿಜ್ವೇಲದಲ್ಲಿ ಓರಿನೋಕೋ ಬ್ರಜಿಲಿನಲ್ಲಿ ಸಾವ್ ಫ್ರನ್ಸಿಸ್ಕೋ-ಇವೂ ಯಾನಯೋಗ್ಯ. ಉಳಿದ ನದಿಗಳು ಯಾನಾರ್ಹವಾಗಿಲ್ಲ. ಒಟ್ಟಿನಲ್ಲಿ ಆಂತರಿಕ ಜಲಮಾರ್ಗಗಳ ಮೇಲೆ ಸಂಚಾರದ ಪರಿಮಾಣ ಕಡಿಮೆ. ಇದನ್ನು ಅಭಿವೃದ್ಧಿ ಪಡಿಸಲು ಹೆಚ್ಚು ಅನುಕೂಲಗಳಿಲ್ಲ.

	ಸಮುದ್ರ ಸಾರಿಗೆ ಮೂರು ತೆರ : 1. ಚಿಲಿ, ಬ್ರಜಿಲ್, ಆರ್ಜೆಂಟೀನ ಮುಂತಾದ ದೇಶಗಳಲ್ಲಿ ಆಯಾ ದೇಶಗಳ ಬಂದರುಗಳ ನಡುವೆ ಸಂಪರ್ಕ ಕಲ್ಪಿಸುವ ಕರಾವಳಿ ಸಾರಿಗೆ, 2. ದಕ್ಷಿಣ ಅಮೆರಿಕದ ವಿವಿಧ ದೇಶಗಳ ನಡುವಣ ಸಾರಿಗೆ, 3. ದಕ್ಷಿಣ ಅಮೆರಿಕದ ದೇಶಗಳಿಗೂ ಪ್ರಪಂಚದ ಇತರ ದೇಶಗಳಿಗೂ ನಡುವಣ ಸಾರಿಗೆ. ಕಳೆದ ದಶಕದಲ್ಲಿ ದಕ್ಷಿಣ ಅಮೆರಿಕದ ಹಡಗುಗಳು ಆಮದಿನ ಸೇ. 30ರಷ್ಟು ಹಾಗೂ ರಫ್ತಿನ ಸೇ. 10ರಷ್ಟನ್ನು ಸಾಗಿಸಿದುವು.

	ದಕ್ಷಿಣ ಅಮೆರಿಕದ ರೈಲ್ವೆ ವ್ಯವಸ್ಥೆ ತೃಪ್ತಿಕರವಲ್ಲ. ರೈಲ್ವೆಗಳು ಸಾಗಿಸುವ ಸರಕು ಅಲ್ಪ. ಏಕೆಂದರೆ ಭಾರವಾದ ಸರಕುಗಳು ಉತ್ಪಾದನೆಯಾಗುವುದು ಸಾಮಾನ್ಯವಾಗಿ ರಫ್ತಿಗಾಗಿಯೇ. ಅವು ಕರಾವಳಿಯ ಬಳಿಯಲ್ಲಿ ಉತ್ಪಾದನೆಯಾಗುತ್ತವೆ. ಬಹುತೇಕ ಮಾರ್ಗಗಳು ಏಕಪಥೀಯ. ಆದ್ದರಿಂದ ಸಂಚಾರ ಬಲು ನಿಧಾನ. ಗೇಜುಗಳ ವ್ಯತ್ಯಾಸವೂ ಒಂದು ತೊಂದರೆ.

	1970ರಲ್ಲಿ ಸುಮಾರು 58,000 ಮೈ. ಉದ್ದದ ರೈಲುಮಾರ್ಗಗಳಿದ್ದುವು. ಇವುಗಳಲ್ಲಿ ಅರ್ಧ ಭಾಗ ಇದ್ದುದು ಅರ್ಜೆಂಟೀನದಲ್ಲಿ, ಸುಮಾರು 12,000 ಮೈ. ಬ್ರಜಿಲ್‍ನಲ್ಲಿ. ರೈಲ್ವೆಗಳು ಬಹುತೇಕ ಸರ್ಕಾರಿ ಒಡೆತನದಲ್ಲಿವೆ.

	ದಕ್ಷಿಣ ಅಮೆರಿಕದಲ್ಲಿ ರಸ್ತೆಗಳು ಸಾಕಷ್ಟು ಇವೆ. 1971ರಲ್ಲಿದ್ದಂತೆ ಒಟ್ಟು ರಸ್ತೆಗಳ ಉದ್ದ 10,47,000 ಮೈ. ಇದರಲ್ಲಿ 84,000 ಮೈ. ಮಾತ್ರ ಕಾನ್‍ಕ್ರೀಟ್, ಷೆಲ್‍ಕ್ರೀಟ್ ಅಥವಾ ತಾರು ರಸ್ತೆ. ಈಗ ಸು 3.2 ಮಿಲಿಯನ್ ಕಿ.ಮೀ ಗಳ ಉದ್ದದ ರಸ್ತೆಯಿದ್ದು ಇದರಲ್ಲಿ ಸೇ.10 ಭಾಗ ಮಾತ್ರ ಸ್ಮಧಾರಿತ ರಸ್ತೆಯಾಗಿದೆ. 

	ಸು.1500 ವಿಮಾನ ನಿಲ್ದಾಣಗಳಿದ್ದು, ದಕ್ಷಿಣ ಅಮೆರಿಕದ ಎಲ್ಲ ರಾಜಧಾನಿಗಳಿಗೂ ದೊಡ್ಡ ನಗರಗಳಿಗೂ ವಿಮಾನ ಸಂಪರ್ಕವುಂಟು.

	ಆಮದು-ರಫ್ತು : ಗೋದಿಯಿಂದ ಉಣ್ಣೆಯ ವರೆಗೂ ಪೆಟ್ರೋಲಿಯಮ್‍ನಿಂದ ಕಾಳಿನ ಎಣ್ಣೆಗಳ ವರೆಗೂ ಖಂಡದ ರಫ್ತು ವೈವಿಧ್ಯಪೂರಿತ. ರಫ್ತು ಸರಕುಗಳಲ್ಲಿ ಮುಖ್ಯವಾದವು ಆಹಾರ ಪದಾರ್ಥಗಳು ಮತ್ತು ಕೈಗಾರಿಕೆಯ ಕಚ್ಚಾ ಸಾಮಗ್ರಿಗಳು. ಬ್ರಜಿಲಿನಿಂದ ಹತ್ತಿಬಟ್ಟೆಗಳು, ಎಕ್ವಡಾರ್‍ನಿಂದ ಹ್ಯಾಟುಗಳು ಮತ್ತು ಉರಗ್ವೆಯಿಂದ ಮಾಂಸ ರಫ್ತಾಗುತ್ತವೆ. ಖಂಡದ ರಫ್ತಿನಲ್ಲಿ ಸೇ. 75ರಷ್ಟು ಪಾಲು ಆರ್ಜೆಂಟೀನ, ಬ್ರಜಿಲ್ ಮತ್ತು ವೆನಿಜ್ವೇಲ ದೇಶಗಳದು. ಆರ್ಜೆಂಟೀನದಿಂದ ಮಾಂಸ, ಗೋದಿ, ಜೋಳ, ಚರ್ಮ, ಎಣ್ಣೆಗಳೂ ಬ್ರಜಿಲಿನಿಂದ ಕಾಫಿ, ಹತ್ತಿ, ಹತ್ತಿಬಟ್ಟೆ, ಕಕೇವೊ, ಚರ್ಮ, ಎಣ್ಣೆ, ಅರಗುಗಳೂ ವೆನಿಜ್ವೇಲದಿಂದ ಪೆಟ್ರೋಲಿಯಂ ಕಾಫಿ, ಕಕೇವೊ, ಚಿನ್ನ ಮತ್ತು ಪಶುಗಳೂ ರಫ್ತಾಗುತ್ತವೆ.  ಕೊಲಂಬಿಯಾದಿಂದ ಪ್ಲಾಟಿನಂ ಮತ್ತು ಚಿನ್ನ, ಎಕ್ವಡಾರಿನಿಂದ ಚಿನ್ನ, ಪೆರುವಿನಿಂದ ಪೆಟ್ರೋಲಿಯಂ ಮತ್ತು ತಾಮ್ರ, ಚಿಲಿಯಿಂದ ತಾಮ್ರ, ನೈಟ್ರೇಟ್ ಮತ್ತು ಕಬ್ಬಿಣ, ಬೊಲಿವಿಯದಿಂದ ತವರ, ಬೆಳ್ಳಿ ಮತ್ತು ಸತು ನಿರ್ಯಾತವಾಗುತ್ತವೆ.

ಆಮದಿನಲ್ಲಿ ಮುಖ್ಯವಾದವು ಆಹಾರ ಪದಾರ್ಥಗಳು, ಪಾನೀಯಗಳು, ಯಂತ್ರಗಳು, ಹತ್ತಿಬಟ್ಟೆಗಳು, ಕಬ್ಬಿಣ ಮತ್ತು ಉಕ್ಕಿನ ಸರಕುಗಳು. ಈ ಖಂಡ ಕೈಗಾರಿಕೆಗಳಲ್ಲಿ ಹಿಂದುಳಿದಿದೆಯೆಂಬುದು ಅದರ ಅಮದು ಮತ್ತು ರಫ್ತುಗಳಿಂದ ವೇದ್ಯವಾಗುತ್ತದೆ.

	ಜನತೆ : ಖಂಡದಲ್ಲಿ ದಕ್ಷಿಣ ಅಮೆರಿಕನ್ ಇಂಡಿಯನ್, ಯೂರೋಪಿಯನ್ ಮತ್ತು ನೀಗ್ರೋ ಎಂಬ ಮೂರು ಮುಖ್ಯ  ಬುಡಕಟ್ಟುಗಳಿಂದ ವಿಕಾಸಗೊಂಡಿರುವ ಐದು ದೊಡ್ಡ ಜನಾಂಗಗಳಿವೆ.  1.  ಆಂಡಿಯನ್ ಇಂಡಿಯನ್,  2.  ಆಂಡಿಯನೇತರ ಇಂಡಿಯನ್,  3.  ಯೂರೋಪಿಯನ್,  4.  ಇಂಡಿಯನ್ ಯೂರೋಪಿಯನ್ ಮಿಶ್ರದಿಂದ ಬಂದ ಮೆಸ್ಟಿಜೊಗಳು ಮತ್ತು 5.  ಮಿಶ್ರಗೊಂಡ ನೀಗ್ರೋಗಳು.

     ದಕ್ಷಿಣ ಕೊಲಂಬಿಯಾದಿಂದ ಉತ್ತರ ಚಿಲಿಯ ವರೆಗಿನ ಆಂಡೀಸ್ ಪರ್ವತಗಳಲ್ಲಿ ಅಂಡಿಯನ್ ಇಂಡಿಯನರೂ ಗೈಯಾನ ಪ್ರಸ್ಥಭೂಮಿ, ಆಮೆಜಾóನ್ ಬಯಲಿನ ಬಹುಭಾಗ, ಬ್ರಜಿಲ್ ಪ್ರಸ್ಥಭೂಮಿಯ ಉತ್ತರ ಮತ್ತು ವಾಯುವ್ಯ ಭಾಗಗಳಲ್ಲಿ ಇತರ ಇಂಡಿಯನ್ನರೂ ದಕ್ಷಿಣ ಮತ್ತು ಮಧ್ಯ ಚಿಲಿ,  ಅರ್ಜೆಂಟೀನದ ಗ್ರಾನ್ ಚಾಕೋ, ನೈಋತ್ಯ ಉರಗ್ವೇ ಮತ್ತು ದಕ್ಷಿಣ ಬ್ರಜಿಲ್‍ಗಳಲ್ಲಿ ಸಾಮಾನ್ಯವಾಗಿ ಶುದ್ಧ ಯುರೋಪಿಯನ್ನರೂ ಇದ್ದಾರೆ.  ನೀಗ್ರೋ ಅಥವಾ ಮಿಶ್ರ ನೀಗ್ರೋಗಳು ಪ್ರಧಾನವಾಗಿ ಇರುವ ಪ್ರದೇಶಗಳು ಕೊಲಂಬಿಯ ತಗ್ಗು ಬಯಲು, ಪೂರ್ವ ಮತ್ತು ಆಗ್ನೇಯ ಬ್ರಜಿಲ್, ಖಂಡದ ಉಳಿದ ಪ್ರದೇಶಗಳಲ್ಲಿ ಇಂಡಿಯನ್ ಮತ್ತು ಯೂರೋಪಿಯನ್ ಮಿಶ್ರ ಜನರಿದ್ದಾರೆ.  ಬ್ರಜಿಲ್‍ನಲ್ಲಿ ಈ ಮಿಶ್ರಣ ತುಂಬ ಹೆಚ್ಚು.                
(ಕೆ.ಆರ್.ಆರ್.)

	1970 ರಲ್ಲಿ ದಕ್ಷಿಣ ಅಮೆರಿಕದಲ್ಲಿ ಸುಮಾರು 19,00,00,000 ಜನ ಇದ್ದರು.  1920-1970ರ ನಡುವಣ ಅವಧಿಯಲ್ಲಿ ಇಲ್ಲಿಯ ಜನಸಂಖ್ಯೆ 12,90,00,000 ದಷ್ಟು ಹೆಚ್ಚಿತು. ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆ ಬೆಳೆವಣಿಗೆಯ ದರ ಇಲ್ಲಿದೆ.  ಇದಕ್ಕೆ ಕಾರಣ ವಿದೇಶಿಯರ ವಲಸೆಯಲ್ಲ.  1860-1930 ರಲ್ಲಿ ಮಾತ್ರ ಅರ್ಜೆಂಟೀನ, ಉರಗ್ವೇ ಮತ್ತು ಬ್ರಜಿಲ್‍ನಲ್ಲಿ ವಲಸೆಗಾರರಿಂದ ಜನಸಂಖ್ಯೆ ಬೆಲೆಯಿತು.  ಇಲ್ಲಿಯ ಜನಸಂಖ್ಯೆಯ ಸ್ಪೋಟಕ್ಕೆ ಸಹಜ ಬೆಳೆವಣಿಗೆಯೇ ಕಾರಣ.  ಮರಣದರ ಕಡಿಮೆಯಾಗಿ ಜನನ ದರ ಅಧಿಕವಾಗಿಯೇ ಇರುವುದರಿಂದ ಒಟ್ಟಿನಲ್ಲಿ ಜನಸಂಖ್ಯೆ ಅಗಾಧವಾಗಿ ಏರುತ್ತಿದೆ.  ಇದು ಪರಿವರ್ತನೆಯ ಹಂತ.  ಜನಸಂಖ್ಯೆಯ ಬೆಳೆವಣಿಗೆಯ ಔನ್ನತ್ಯದ ಈ ಹಂತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಮಕ್ಕಳ ಪ್ರಮಾಣ ಅಧಿಕ.  ದಕ್ಷಿಣ ಅಮೆರಿಕದಲ್ಲಿ ಒಟ್ಟು ಜನಸಂಖ್ಯೆ ಸೇ. 42-48 ರಷ್ಟು ಮಕ್ಕಳಿದ್ದಾರೆ.   (ಅರ್ಜೆಂಟೀನ, ಚಿಲಿ ಮತ್ತು ಉರಗ್ವೇ ವಿನಾ).  ಇದರ ಪರಿಣಾಮವಾಗಿ ಶ್ರಮಿಕರ ವಯೋಗುಂಪಿನ ಪ್ರಮಾಣ ಕಡಿಮೆ (55%). ಅವಲಂಬನದ ಪ್ರಮಾಣ ಅಧಿಕವಾಗುತ್ತದೆ.  ಶ್ರಮಿಕ ವಯಸ್ಕ ಗುಂಪಿನ ಪ್ರತಿ 100 ಜನಕ್ಕೆ ಅವರನ್ನು ಅವಲಂಬಿಸಿರುವ ಮಕ್ಕಳ ಹಾಗೂ ವೃದ್ಧರ ಸಂಖ್ಯೆ 85.  ಇದರಿಂದ ಶ್ರಮಿಕ ವಯೋಗುಂಪಿನ ಮೇಲೆ ಭಾರ ಬೀಳುತ್ತದೆ.  ಆದರೆ ಇದಕ್ಕೆ ತಕ್ಕಂತೆ ಆರ್ಥಿಕತೆಯ ಉತ್ಪಾದಕತೆ ಅಧಿಕವಾಗಿಲ್ಲ.

    ಇದರ ಇನ್ನೊಂದು ಪರಿಣಾಮವೆಂದರೆ ನಗರಗಳ ಸ್ಪೋಟ.  10,000 ಕ್ಕಿಂತ ಅಧಿಕ ಜನಸಂಖ್ಯೆ ಇರುವ ಪಟ್ಟಣಗಳು ಶೇ. 25 ರಿಂದ (1950) ಶೇ. 50 ಕ್ಕೆ (1970) ಏರಿದುವು.

     ಆದರೆ ಒಟ್ಟಿನಲ್ಲಿ ದಕಿಷಣ ಅಮೆರಿಕದ ಜನಸಾಂದ್ರತೆ ಬಹಳ ಕಡಿಮೆ.  ದೊಡ್ಡ ನಗರಗಳು ಮತ್ತು ಅವುಗಳ ಹಿನ್ನಾಡುಗಳಲ್ಲಿ ಜನಸಂಖ್ಯೆ ಸಾಂದ್ರಿಕರಿಸಿದೆ.  ಇಡೀ ಖಂಡವೇ ಅಲ್ಲಲ್ಲಿ ಜನಸಂಖ್ಯಾ ದೀಪಗಳಿರುವ ವಿಸ್ತಾರ ಸಾಗರದಂತಿದೆ.

    ಇತಿಹಾಸ :  ಕೊಲಂಬಸ್ ಮೂರನೆಯ ಸಾರಿ ಯಾತ್ರೆ ಮಾಡಿದಾಗ (1498)  ದಕ್ಷಿಣ ಅಮೆರಿಕದ ಮುಖ್ಯ ನೆಲವನ್ನು ಕಂಡ.  ಆಗ ವಿಭಿನ್ನ ಸಂಸ್ಕøತಿಗಳ ಅನೇಕ ಇಂಡಿಯನ್ ಬಣಗಳು ಅಲ್ಲಿ ವಾಸಿಸುತ್ತಿದ್ದವು.  1560ರ ವೇಳೆಗೆ ಸ್ಪೇನ್ ದೇಶ ಈ ಖಂಡದ ಬಹುಭಾಗವನ್ನು ಆಕ್ರಮಿಸಿಕೊಂಡಿತ್ತು.  ಈ ಖಂಡದ ಅನೇಕ ಖನಿಜ ನಿಕ್ಷೇಪಗಳು ಪತ್ತೆಯಾಗಿದ್ದುವು.  ರೋಮನ್  ಕ್ಯಾತೊಲಿಕ್ ಮತ ಪ್ರಚಾರಕ್ಕೆ ಬಂದಿತ್ತು.  ಅದು ಆಗ ರೂಪಿಸಿದ ಆಡಳಿತ ವ್ಯವಸ್ಥೆ 18 ನೆಯ ಶತಮಾನದ ವರೆಗೂ  ಮುಂದುವರಿಯಿತು.  ಆ ವೇಳೆಗೆ ಬ್ರಿಟಿನ್ ಈ ಖಂಡದ ಪ್ರದೇಶಗಳ ಮೇಲೆ ಕಣ್ಣು ಹಾಕಿತು.  ಪೋರ್ಚುಗೀಸರು ನೀಗ್ರೋ ಗುಲಾಮರನ್ನು ತಂದು ಬ್ರಜಿಲಿನಲ್ಲಿ ಕೃಷಿಯನ್ನು ಬೆಳೆಸಿದರು.  17,18 ನೆಯ ಶತಮಾನಗಳಲ್ಲಿ ಇನ್ನೂ ಆಕ್ರಮಿಸಲ್ಪಡದೆ ಇದ್ದ ನೆಲದ ಮೇಲೆ ಬ್ರಿಟಿಷರೂ ಫ್ರೆಂಚರೂ ಡಚ್ಚರೂ ತಂತಮ್ಮ ಒಡೆತನ ಸ್ಥಾಪಿಸಿದರು.
 
   ದಕ್ಷಿಣ ಅಮೆರಿಕದಲ್ಲಿ ಸ್ಪ್ಯಾನಿಷ್ ವಸಾಹತುಗಳ ಜನರು 1810-25 ರಲ್ಲಿ ಪ್ರಬಲವಾದ ಹೋರಾಟ ನಡೆಸಿ ಸ್ವಾತಂತ್ರ್ಯ ಗಳಿಸಿಕೊಂಡರು.  1922-23 ರಲ್ಲಿ ಬ್ರಜಿಲ್ಲು ಪೋರ್ಚುಗಲ್ಲಿನಿಂದ ವಿಮೋಚನೆ ಪಡೆಯಿತು.  ಆಗ ಇದು ಸ್ಥಾಪಿಸಿದ ಸಾಮ್ರಾಜ್ಯ 1889ರ ವರೆಗೂ ಮುಂದುವರಿಯಿತು.

    ಸ್ಪ್ಯಾನಿಷ್ ಪ್ರದೇಶಗಳು ಸ್ವಾತಂತ್ರ್ಯಗಳಿಸಿದ ಮೇಲೂ ಸುಮಾರು ಒಂದು ಶತಮಾನ ಕಾಲ ನಿರಂಕುಶ ಆಳ್ವಿಕೆಗೆ ಒಳಪಟ್ಟಿದ್ದವು.  ಕೆಲವೇ ಕೆಲವು ಬಲಿಷ್ಠರು ಅವನ್ನು ಆಳುತ್ತಿದ್ದರು.   1875ರಿಂದ ಅಲ್ಲಿಗೆ ಯೂರೋಪಿಯನರು ಅಧಿಕ ಸಂಖ್ಯೆಯಲ್ಲಿ ಬಂದು ಅಲ್ಲಿ ಬಂಡವಾಳವನ್ನು ಹೂಡಿದರು.

    ಒಂದನೆಯ ಮಹಾ ಯುದ್ಧದಿಂದ ಈಚೆಗೆ ಇಲ್ಲಿಯ ಗಣರಾಜ್ಯಗಳು ಬಹಳ ಮಟ್ಟಿಗೆ ಬದಲಾಗಿವೆ.  ಹೊಸ ಮಧ್ಯಮ ವರ್ಗಗಳು ಹಾಗೂ ಕಾರ್ಮಿಕ ವರ್ಗಗಳು ರಾಜಕಾರಣದಲ್ಲಿ ಪಾಲ್ಗೋಳ್ಳುತ್ತಿವೆ.  ಅನೇಕ ದೇಶಗಳು ಅಮೆರಿಕ ಸಂಯುಕ್ತ ಸಂಸ್ಥಾನಗಳ ಪ್ರಭಾವಕ್ಕೆ ಒಳಗಾಗಿವೆ.  ಹಲವು ದೇಶಗಳಲ್ಲಿ ಕ್ಷಿಪ್ರ ಆಕ್ರಮಣಗಳೂ ಸರ್ವಾಧಿಕಾರವೂ ಸಾಮಾನ್ಯವಾಗಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ